ಶಿವಮೊಗ್ಗ,ಡಿ.೨೨: ಸುಳ್ಳು ಜಾತಿ ಪತ್ರ ನೀಡಿ ಕುವೆಂಪು ವಿವಿಯಲ್ಲಿ ಪ್ರಾಧ್ಯಾಪಕ ಹುದ್ದೆಯ ಜೊತೆಗೆ ಪ್ರಭಾರ ಕುಲಪತಿಗಳ ಹುದ್ದೆಯಲ್ಲಿರುವ ಪ್ರೊ. ಎಸ್. ವೆಂಕಟೇಶ್‌ರವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಜೈ ಬೀಮ್ ಕನ್ನಡ ಜಾಗೃತಿ ವೇದಿಕೆಯ ಅಧ್ಯಕ್ಷ ಮಂಜುನಾಥ್ ಎಸ್.ಎಸ್. ಎಂದು ಹೇಳಿದರು.


ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾಧ್ಯಾಪಕ ಪ್ರೊ. ಎಸ್. ವೆಂಕಟೇಶ್‌ರವರ ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸ್ನಾತಕೋತ್ತರ ವಾಣಿಜ್ಯ

ಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಕುವೆಂಪು ವಿವಿಯಲ್ಲಿ ಪ್ರಭಾರ ಕುಲಪತಿಗಳಾಗಿದ್ದಾರೆ. ಆದ್ದರಿಂದ ಕೂಡಲೇ ಅವರನ್ನು ಪ್ರಾಧ್ಯಾಪಕ ಹುದ್ದೆಯಿಂದ ವಜಾಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


ಈ ಬಗ್ಗೆ ನಮ್ಮ ಸಂಘಟನೆಯಿಂದ ದೂರು ಸಲ್ಲಿಸಲಾಗಿದ್ದರೂ ಕೂಡ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಹುದ್ದೆಯಿಂದ ಪರಿಶಿಷ್ಟ ಪಂಗಡದ ಅಭ್ಯರ್ಥಿಯೊಬ್ಬರಿಗೆ ಮೋಸ ಮಾಡಿದಂತ್ತಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜು ಎಂ.ಹೆಚ್., ಶಿವಪ್ರಸಾದ್, ನಳೀನ್‌ಕುಮಾರ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!