ಶಿವಮೊಗ್ಗ, ಡಿಸೆಂಬರ್ 08,
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲ್ಪಡುತ್ತಿರುವ 2024-25ನೇ ಸಾಲಿನ ಪ್ರವೇಶಕ್ಕೆ ಕ್ರೀಡಾಶಾಲೆ/ಕ್ರೀಡಾನಿಲಯಗಳಿಗೆ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಅಥ್ಲೆಟಿಕ್ಸ್,
ಹಾಕಿ, ಫುಟ್ಬಾಲ್, ಕುಸ್ತಿ ಕ್ರೀಡೆಗಳಿಗೆ ವಿವಿಧ ಮಟ್ಟಗಳಲ್ಲಿ ಆಯ್ಕೆಯನ್ನು ನಡೆಸಲು ದಿನಾಂಕ ನಿಗದಿಗೊಳಿಸಲಾಗಿರುತ್ತದೆ.
ಸೊರಬ ತಾಲ್ಲೂಕು ಮಟ್ಟದ ಕ್ರೀಡಾ ಶಾಲೆಯ ಆಯ್ಕೆಯನ್ನು ಮೊದಲು
ಡಿ.26 ರಂದು ನಡೆಸಬೇಕೆಂದು ನಿರ್ಧರಿಸಲಾಗಿತ್ತು. ಇದೀಗ ಅದರ ಬದಲಾಗಿ ಡಿ.27 ರಂದು ನಡೆಸಬೇಕೆಂದು ತೀರ್ಮಾಡಿಸಲಾಗಿದೆ.
ಆನವಟ್ಟಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ಬಾಳಪ್ಪ ಮಾನೆ ಮೊ.ಸಂ: 9880653266, ಪಿ.ವಿ.ನಾಗರಾಜ್ 9964599936 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.