ಶಿವಮೊಗ್ಗ ಜಿಲ್ಲಾ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಮೇಲ್ವಿಚಾರಣೆ ಹಿನ್ನೆಲೆಯಲ್ಲಿ ಭಾರಿ ದೊಡ್ಡ ಕಳ್ಳತನವು ಪ್ರಕರಣವನ್ನು ತುಂಗಾನಗರ ಪೊಲೀಸರು ಭೇಧಿಸಿದ್ದು ಅದರಲ್ಲಿ ಆರೋಪಿಗಳನ್ನು ಬಂಧಿಸುವ ಜೊತೆಗೆ ಸುಮಾರು 14 ಲಕ್ಷ ರೂ ಬೆಲೆಬಾಳುವ ಬಂಗಾರ ಮತ್ತಿತರ ವಸ್ತುಗಳನ್ನು ವಾಹನಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಘಟನೆಯ ಸಮಗ್ರ ವಿವರ
ಶಿವಮೊಗ್ಗ-ಎ ಉಪ ವಿಭಾಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕನ್ನ ಕಳುವು ಪ್ರಕರಣಗಳಲ್ಲಿ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆಗಾಗಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಪೊಲೀಸ್ ಅಧೀಕ್ಷಕರು, ಮತ್ತು ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಬಾಲರಾಜ್, ಬಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ – ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ತುಂಗಾನಗರ ಪೊಲೀಸ್ ಠಾಣೆಯ ಮಂಜುನಾಥ್. ಬಿ. ಪಿಐ ನೇತೃತ್ವದ, ಪಿಎಸ್ ಐ ಗಳಾದ ಶಿವಪ್ರಸಾದ್ ವಿ. ಮಂಜುನಾಥ್, ರಘುವೀರ್ ಎಮ್. . ಕುಮಾರ ಕೂರಗುಂದ ದೂದ್ಯಾನಾಯ್ಕ
ಮನೋಹರ್ ಎ.ಎಸ್.ಐ. ಹಾಗೂ ಸಿಬ್ಬಂದಿಯವರಾದ ಹೆಚ್ ಡಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್ ಮತ್ತು ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಎಮ್.ಜಿ. ಹಾಗೂ ಚೇತನರವರಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು
ಈ ತನಿಖಾ ತಂಡವು ನಿನ್ನರ ಆರೋಪಿತರಾದ ಸಂತೋಷ ಯಾನೇ ಎಮ್ಮೆ ಸಂತೋಷ, 36 ವರ್ಷ, ಮಾಗಡಿ ರಸ್ತೆ ಬೆಂಗಳೂರು, ಸ್ವಂತ ವಿಳಾಸ ಶಿವಪ್ಪ ಬಡಾವಣೆ, ಅಲ್ಲೂರು ರಸ್ತೆ ಪಿರಿಯಾಪಟ್ಟಣ ಮೈಸೂರು ಜಿಲ್ಲೆ, ಮಹಮದ್ ನದ್ದಿಮ್ @ ನದ್ದಿಮ್ @ ನದ್ದು, 30 ವರ್ಷ, ಅಶೋಕ ನಗರ, ಶಿವಮೊಗ್ಗ, ಇಮ್ರಾನ್, 32 ವರ್ಷ, ಅಶೋಕನಗರ, ಶಿವಮೊಗ್ಗ ಮತ್ತು ಸುರೇಶ್ ಕೆ, 43 ವರ್ಷ, ಬೊಮ್ಮನಕಟ್ಟೆ ಆಶ್ರಯ ಬಡಾವಣೆ, ಶಿವಮೊಗ್ಗ ರವರುಗಳನ್ನು ಬಂಧಿಸಿದೆ.
ಆರೋಪಿತರಿಂದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 05 ಸ್ವತ್ತು ಕಳವು ಪ್ರಕರಣಗಳಾದ 1) ಗುನ್ನೆ ಸಂಖ್ಯೆ 128/2023, 2) ಗುನ್ನೆ ಸಂಖ್ಯೆ 175/2023, 3) ಗುನ್ನೆ ಸಂಖ್ಯೆ 412/2023, 4) ಗುನ್ನೆ ಸಂಖ್ಯೆ 462/2023 ಮತ್ತು 5) ಗುನ್ನೆ ಸಂಖ್ಯೆ 483/2023 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 12,65,000/- ರೂಗಳ 230 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 72,000/- ರೂಗಳ 1 ಕೆಜಿ 200 ಗ್ರಾಂ ಬೆಳ್ಳಿ ಆಭರಣಗಳು, ರೂ 25,140/- ನಗದು ಹಣ, ಅಂದಾಜು ಮೌಲ್ಯ 10,000/- ರೂಗಳ ಕೃತ್ಯಕ್ಕೆ ಬಳಸಿದ ದ್ವಿ ಚಕ್ರ ವಾಹನ ಸೇರಿ ಒಟ್ಟು ರೂ 13,87,000/- ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಪೊಲೀಸ್ ಅಧೀಕ್ಷಕರು, ಪ್ರಶಂಸಿಸಿ ಅಭಿನಂದಿಸಿದ್ದಾರೆ.