ಸಾಗರ : ಇಲ್ಲಿನ ಶ್ರೀರಾಮಪುರ ಬಡಾವಣೆಯ ಪ್ರಗತಿಪರ ಕೃಷಿ ಗೌತಮ್ ಪೈ ಎಂಬುವವರ ಮನೆಯ ಅಂಗಳದಲ್ಲಿ ಬೆಳೆದಿದ್ದ ಎರಡು ಗಂಧದ ಮರವನ್ನು ಕದ್ದೊಯ್ದ ಘಟನೆಗೆ ಸಂಬಂಧಪಟ್ಟಂತೆ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿಪರ ಕೃಷಿಕರಾಗಿರುವ ಗೌತಮ್ ಪೈ ಮನೆಯ ಅಂಗಳದಲ್ಲಿ ಪಶ್ಚಿಮಘಟ್ಟದ ವಿವಿಧ ಜಾತಿಯ ಹೂವುಹಣ್ಣು, ಗಿಡಮರಗಳನ್ನು ಬೆಳೆಸಿದ್ದಾರೆ. ಎರಡು ಗಂಧದ ಮರಗಳು
೧೮ ಹಾಗೂ ೨೨ ವರ್ಷ ವಯಸ್ಸಿನದ್ದಾಗಿತ್ತು. ಗಂಧದ ಮರವು ಉತ್ತಮವಾಗಿ ಬೆಳೆದಿರುವುದನ್ನು ಪತ್ತೆಹಚ್ಚಿದ ಚೋರರು ಬೆಳಗಿನ ಜಾವ ರಂಬೆಕೊಂಬೆಗಳನ್ನು ಕತ್ತರಿಸಿ ಮರದ ಕಾಂಡವನ್ನು ಹೊತ್ತೊಯ್ದಿದ್ದಾರೆ.
ಒಂದು ಅಂದಾಜಿನ ಪ್ರಕಾರ ಕಳ್ಳತನ ಮಾಡಿರುವ ಎರಡು ಬಲಿಷ್ಟ ಮರಗಳ ಬೆಲೆ ಸುಮಾರು ೩ಲಕ್ಷಕ್ಕೂ ಅಧಿಕ ಎಂದು ಹೇಳಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ.