ಶಿವಮೊಗ್ಗ, ನ.28:
ವೈದ್ಯರಾಗಿ ಸಲಹೆ ನೀಡುವುದು ಸುಲಭ, ರೋಗಿಯಾಗಿ ಅನುಭವಿಸುವುದು ಕಷ್ಟ ಎಂದು ರೋಗಿಯ ಹಾಗೂ ರೋಗದ ಕಷ್ಟವನ್ನು ಮನದಾಳದ ನೋವಿನ ಎಳೆಯಲ್ಲಿ ಸರ್ಜಿ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಡಾ. ಧನಂಜಯ ಸರ್ಜಿ ಅವರು ಹಂಚಿಕೊಂಡರು.
ಅವರ ಮನದ ಮಾತುಗಳು ನಿಜಕ್ಕೂ ಇಲ್ಲಿ ಅನುಭವ ಜನ್ಯ ಹಾಗೂ ಅರ್ಥಪೂರ್ಣ. ರೌಂಡ್ ಟೇಬಲ್ ಪತ್ರಿಕಾಗೋಷ್ಠಿಯೊಂದಕ್ಕೆ ಆಗಮಿಸಿದ್ದ ಡಾಕ್ಟರ್ ಸರ್ಜಿ ಅವರು ಮಾತು ಆರಂಭಿಸುವ ಮುನ್ನ ಹೇಳಿದ ಮಾತು ಇಂತಿತ್ತು. ನಿಜಕ್ಕೂ ಸಲಹೆ ನೀಡುವುದು ಸುಲಭ, ಅನುಭವಿಸುವುದು ಕಷ್ಟ ಎಂಬುದಕ್ಕೆ ಸಾಕ್ಷಿಕರಣವಾಗಿ ನಿಂತಿತ್ತು.
ಕಳೆದ ವಾರದಿಂದ ಚಿಕನ್ ಗುನ್ಯಾ ಸಮಸ್ಯೆ ಅನುಭವಿಸಿದ್ದ ಈ ವೈದ್ಯರು ಅದರಿಂದ ಈಗಲೂ ಅನುಭವಿಸುತ್ತಿರುವ ದೈಹಿಕ ನೋವುಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದರು. ಹೌದು ವೈದ್ಯರಾಗಿ ನಾವು ನಿಮಗೇನು ಆಗುವುದಿಲ್ಲ ತೊಂದರೆಯಾಗೊಲ್ಲ. ಆರಾಮಾಗಿ ರೆಸ್ಟ್ ತೆಗೆದುಕೊಳ್ಳಿ. ಸರಿ ಹೋಗುತ್ತೀರಿ. ಗುಳಿಗೆ, ಔಷಧಿಯನ್ನು ಸಕಾಲದಲ್ಲಿ ಸೇವಿಸಿ ಎಂದು ರೋಗಿಗಳಿಗೆ ಸಲಹೆ ನೀಡುವುದು ಸುಲಭ ಆದರೆ ರೋಗಿಯಾಗಿ ಅನುಭವಿಸುವುದು ನಿಜಕ್ಕೂ ಕಷ್ಟ ಎಂಬುದನ್ನು ಮತ್ತೊಮ್ಮೆ ಸವಿಸ್ತಾರವಾಗಿ ಹೇಳಿದರು.
ಹೌದಲ್ಲವೇ ಸಲಹೆಗೂ ಅನುಭವಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಬದುಕಿನ ಪಾಠ ಕಲಿಸುವುದು ಸಲಹೆ ಪಾಲಿಸುವುದರಿಂದ ಅಲ್ಲ. ಅನುಭವಿಸುವುದರಿಂದ ಅಲ್ಲವೇ? ವೈದ್ಯರಾಗಿ ಮಾದ್ಯಮ ಮಿತ್ರರೊಂದಿಗೆ ಮನ ಬಿಚ್ಚಿ ಮಾತನಾಡಿದ ಡಾಕ್ಟರ್ ಸರ್ಜಿ ನಮ್ಮ ನಡುವಿನ ಅಪರೂಪದ ವೈದ್ಯರಲ್ಲಿ ಒಬ್ಬರು. ತಮ್ಮ ದೈಹಿಕ ನೋವುಗಳ ನಡುವೆಯೂ ರೋಗಿಗಳ ಮಾನಸಿಕ ಶಕ್ತಿಯನ್ನು ಹೆಚ್ಚಿಸುವ ಅವರ ಪ್ರಯತ್ನ ಶ್ಲಾಘನೀಯವಾದದ್ದು.