ಶಿವಮೊಗ್ಗ: ಅ.೩೦ರಂದು ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್‌ರು ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಬ್ಲಾಕ್‌ಸ್ಮಿತ್ ಮತ್ತು ವೆಲ್ಡಿಂಗ್ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ,
ದೋಷಪೂರಿತ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡಿರುತ್ತಾರೆ ಮತ್ತು ದೋಷಪೂರಿತ ಸೈಲೆನ್ಸರ್‌ಗಳನ್ನು ದ್ವಿ ಚಕ್ರ ವಾಹನಗಳಿಗೆ ಅಳವಡಿಸಿಕೊಟ್ಟಲ್ಲಿ ಐಎಂವಿ
ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿವೈಎಸ್‌ಪಿ ಸುರೇಶ್ ಎಂ, ಟ್ರಾಪಿಕ್ ಇನ್ಸ್‌ಫೆಕ್ಟರ್ ಸುರೇಶ್‌ಕುಮಾರ್, ಪಿಎಸ್‌ಐ ತಿರುಮಲೇಶ್ ಹಾಗೂ ಸಂಚಾರಿ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.