ಶಿವಮೊಗ್ಗ,ಅ.22:
ಎಲ್ಲೆಡೆ ಆಯುಧ ಪೂಜೆ ವಿಜಯದಶಮಿ ಸಂಭ್ರಮ ಮನೆ ಮಾಡಿದೆ. ಆದರೆ ಇದರ ನಡುವೆ ಮಳೆಗಾಲದಲ್ಲೂ ಬಿಸಿಲದಗೆಯಲ್ಲಿ ಗಿಡಮರಗಳನ್ನು ಉಳಿಸಿಕೊಳ್ಳಲಾಗದ ರೈತ ಮತ್ತೆ ಕಂಗಾಲಾಗಿದ್ದಾನೆ.
ಇರುವ ನೀರಿನ ಮೂಲಗಳನ್ನು ಬಳಸಿಕೊಂಡು ಬೆಳೆದ ಬೆಳೆಗೆ ಸಾಕಷ್ಟು ನಷ್ಟದ ದರ ಸಿಕ್ಕಿರುವುದು ದುರಂತವೇ ಹೌದು.


ಇಂತಹದೊಂದು ಸತ್ಯ ಸಂಗತಿ ಸಿಕ್ಕದ್ದು ಇಂದು ತುಂಗಾತರಂಗ ಶಿವಮೊಗ್ಗ ಮುಖ್ಯ ರಸ್ತೆಗಳಲ್ಲಿ ಅದುವೇ ಶೀನಪ್ಪ ಶೆಟ್ಟಿ ವೃತ್ತದಿಂದ ಪ್ರೀಡಂ ಪಾರ್ಕ್ ವರೆಗಿನ ರಸ್ತೆಯಲ್ಲಿನ ವ್ಯಾಪಾರ ಮಾಡುತ್ತಿದ್ದ ರೈತರ ಅಳಲಿನ ಧ್ವನಿ ಕೇಳಿ ಇಂತಹದೊಂದು ಮಾತು ಹೇಳಬೇಕಾಗಿರುವುದು ದುರಂತದೇ ಹೌದು.
ಪ್ರತಿ ವರ್ಷ ಎಂದಿನಂತೆ ನಡೆಯುವ ದಸರಾ ಸಂಭ್ರಮದಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವ ಹಾಗೂ ಬಳಕೆಯಾಗುವ ವಸ್ತುಗಳೆಂದರೆ ಚಂಡೆ ಪ್ರತಿಹಾಗೂ ಬೂದಗುಂಬಳಕಾಯಿ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಎರಡು ವಸ್ತುಗಳು ಈ ಬಾರಿ ಅತ್ಯಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿರುವುದು ದುರಂತವಲ್ಲವೇ?


ಏಕೆಂದರೆ ಬಹುತೇಕ ರೈತರನ್ನೇ ಮಾತ್ನಾಡ್ಸಿ ಕಂಡು ಬಂದ ಸತ್ಯವನ್ನು ತಮ್ಮ ಮುಂದಿಡಲು ಪ್ರಯತ್ನಿಸುವ ಒಂದು ವರದಿ ಇದು. ಶಿವಮೊಗ್ಗ ತಾಲೂಕಿನ ಪುರುದಾಳಿನ ಬಳಿ ಸುಮಾರು ಎರಡೂವರೆ ಭೂಮಿಯಲ್ಲಿ ಬೆಳೆದಿದ್ದ ಬೂದಗುಂಬಳ ಶೀನಪ್ಪ ವೃತ್ತ ಎಂದೇ ಕರೆಯುವ ಗೋಪಿ ವೃತ್ತದಲ್ಲಿ ಮಾರಾಟ ಮಾಡುತ್ತಿದ್ದ ಸುಮಾರು ಏಳೆಂಟು ರೈತರ ಮಾತು ಕೇಳಿ ಈ ಮಾತನ್ನ ಹೇಳಬೇಕಾಗಿದೆ.
ಅನ್ನದಾತ ಬರದ ನಡುವೆಯೂ ಬೆಳೆದ ಬೆಳೆಗೆ ಬೆಲೆ ಸಿಗದೆ ದುಃಖ ಅನುಭವಿಸುತ್ತಿರುವುದು ಕಂಡುಬಂದಿದೆ.
ಪ್ರತಿ ವರ್ಷ ಸುಮಾರು 100 ರಿಂದ 200 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಬೂದಗುಂಬಳ ಕಾಯಿಗೆ ಈ ಬಾರಿ 50 ರಿಂದ 60 ರೂಪಾಯಿ ದೊಡ್ಡ ಹಣವಾಗಿದೆ. ಅಂತೇ ಮುಂದೆ ಸಾಗಿದಾಗ ಕಾಣಿಸುವ ಸಾಲು ಸಾಲಿನ ಚಂಡೆ ಹೂವಿನ ಬೆಲೆ ಈ ಬಾರಿ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿರೋದು ಕಂಡುಬರುತ್ತದೆ. ಪ್ರತಿ ವರ್ಷ ಕನಿಷ್ಠ ಕೆಜಿ ಒಂದಕ್ಕೆ ನೂರು ರೂಪಾಯಿವರೆಗಿನ ಬೆಲೆ ಈ ಬಾರಿ 30 ರಿಂದ 40 ರೂಪಾಯಿಗೆ ತಗ್ಗಿದೆ. ಅದಕ್ಕೆ ಸಾಕ್ಷಿಯಾದ ಎಲ್ಲಾ ಫೋಟೋಗಳನ್ನು ಅವರ ಮಾಹಿತಿಗಳನ್ನು ತಮ್ಮ ಮುಂದಿಡುವ ಚಿಕ್ಕ ಪ್ರಯತ್ನ ಇದು.
ಆಯುಧ ಪೂಜೆಯ ಸಂದರ್ಭದಲ್ಲಿ ತಮ್ಮ ತಮ್ಮ ವಾಹನ ಹಾಗೂ ಯಂತ್ರಗಳಿಗೆ ಪೂಜೆ ಸಲ್ಲಿಸುವ ದಿನಮಾನಗಳಲ್ಲೂ ವರ್ತಕರ ಬದಿಗಿಟ್ಟು ನೋಡಿದಾಗಲೂ, ರೈತ ತೆಗೆದುಕೊಂಡು ಬಂದ ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ. ಅಂತೇ ರೈತ ಯಾವುದೇ ಹಣದ ನಿರೀಕ್ಷೆಯಿಲ್ಲದೆ ಕೊಡುವ ಮಾವಿನ ಸೊಪ್ಪು ಬಾಳೆದೆಲೆ ಹಾಗೂ ಬಾಳೆಕಂದುಗಳಿಗೆ ಅದೇ ಬೆಲೆ ಮಾಮೂಲಿಯಾಗಿದೆ.


ಕಷ್ಟಪಟ್ಟು ಬೆಳೆದ ಅದರಲ್ಲೂ ಶಿವಮೊಗ್ಗ ನಗರದಲ್ಲಿ ಅತಿ ಹೆಚ್ಚು ವ್ಯಾಪಾರವಾಗುತ್ತದೆ ಎಂದು ಬಂದ ಹಾನಗಲ್, ಹಾವೇರಿ, ದಾರವಾಡ, ಹರಿಹರ, ರಾಣೇಬೆನ್ನೂರು, ಮಲೆಬೆನ್ನೂರು, ಭದ್ರಾವತಿ ಭಾಗದ ಸಾಕಷ್ಟು ರೈತರು ತಂದಿರುವ ಬೆಳೆಯನ್ನು ಕೊನೆಯ ಪಕ್ಷ ಕಟಾವು ಮಾಡಿಸಿ ಕೂಲಿ ಕಾರ್ಮಿಕನಿಗೆ ನೀಡಿದ ಹಣ ಸಹ ಸಿಗುತ್ತಿಲ್ಲ. ಪ್ರತೀ ಮಾರಿನ ಚಂಡಿ ಹೂವಿನ ಬೆಲೆ ರೂ.40 ಆಗಿದೆ ಅದನ್ನು ಕಟ್ಟಲು ಕೆಲಸ ಮಾಡುವ ಮಹಿಳೆಗೆ ಪ್ರತಿ ಕೆಜಿಗೆ 8 ರೂಪಾಯಿ ಕೊಡಬೇಕು. ಹಾಗಾದರೆ ಅಲ್ಲಿಂದ ಇಲ್ಲಿಗೆ ತರುವ ವಾಹನದ ಖರ್ಚು ಎಲ್ಲಿಗೆ ಬಂತು? ಕೊನೆಯ ಪಕ್ಷ ವಾಹನದ ಖರ್ಚು ಬಂದು ಮಾರುವ ರೈತನ ದಿನಚರಿಯ ಖರ್ಚು ಹಾಗೂ ಅದಕ್ಕಾಗಿ ಬಳಸಿಕೊಂಡ ಕೃಷಿ ಕಾರ್ಮಿಕರ ವೇತನ ಲೆಕ್ಕ ಹಾಕಿದರೆ ನಿಜಕ್ಕೂ ಬೆಳೆದ ರೈತ ಈ ಬಾರಿ ಸತ್ತೆ ಹೋಗಿದ್ದಾನೆ.
ಹೀಗೆ ಆದರೆ ಬರುವ ಬೇಸಿಗೆ ಅವಧಿಯಲ್ಲಿ ಅದು ಹೇಗೆ ತಾನೇ ಜನ ಬದುಕುತ್ತಾರೆ. ರೈತನ ಕಥೆ ಏನು? ತಾನು ಎಲ್ಲ ಸುರಿದುಕೊಂಡು ಆತ ದೇಶ ಉದ್ದಾರ ಮಾಡುವ ಜನರನ್ನು ಉಳಿಸುವ ಅಗತ್ಯವಿದೆಯೇ? ಆತನಿಗೆ ಎಷ್ಟು ಬೇಕೋ ಅಷ್ಟನ್ನು ಆತ ಬೆಳೆಯಲು ಸಾಧ್ಯವೇ?

By admin

ನಿಮ್ಮದೊಂದು ಉತ್ತರ

error: Content is protected !!