ಸಾಗರ,ಸೆ.25: ತಾಲ್ಲೂಕಿನ ವಡನ್ ಬೈಲ್ ಸಮೀಪ ನೀರಿನಲ್ಲಿ ಈಜಲು ತೆರಳಿದ್ದ ಇಬ್ಬರು ನೀರು ಪಾಲಾದ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಕೃಷಿ ಅಧಿಕಾರಿ ಕುಮಾರ್ ಹಾಗೂ ಐಡಿಎಫ್ ಸಿ ಬ್ಯಾಂಕಿನ ಉದ್ಯೋಗಿ ಅರುಣ್ ಎಂದು ಗುರುತಿಸಲಾಗಿದೆ. ಭಾನುವಾರ ಕುಮಾರ್ ಅವರ ಪತ್ನಿಯ ಹುಟ್ಟು ಹಬ್ಬ ಹಿನ್ನಲೆಯಲ್ಲಿ ಕುಟುಂಬ ಸಮೇತ ವಡನ್ ಬೈಲ್ ಸಮೀಪ ಇರುವ ದೇವಿಗುಂಡಿಗೆ ಪ್ರವಾಸಕ್ಕೆ ಹೋಗಿದ್ದರು.
ಮದ್ಯಾಹ್ನ ಊಟ ಮುಗಿಸಿದ ಇವರು ಈಜಲು ತೆರಳಿದ್ದಾರೆ.
ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಇಬ್ಬರ ಶವವನ್ನು ಮೇಲಕ್ಕೆತ್ತಲಾಗಿದ್ದು, ಸಾಗರ ಉಪವಿಭಾಗೀಯ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.
ಸ್ಥಳಕ್ಕೆ ಕಾರ್ಗಲ್ ಸಬ್ ಇನ್ಸ್ಪೆಕ್ಟರ್ ಹೊಳಬಸಪ್ಪ ಹೋಳಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಆಸ್ಪತ್ರೆಯಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.