ವರದಿ: ಗಣಪ, ದೊಡ್ಮನೆ
ಶಿವಮೊಗ್ಗ, ಸೆ.೧೬:
ಬರದ ನಡುವೆಯು ಶಿವಮೊಗ್ಗ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಸಂಭ್ರ ಮದಿಂದ ಆಚರಿಸಲು ಸಜ್ಜಾಗಿದ್ದು, ಮಾರು ಕಟ್ಟೆಗೆ ಸಣ್ಣ ಸಣ್ಣ ಗಣೇಶ ಮೂರ್ತಿಗಳ ಜೊತೆಗೆ ದೊಡ್ಡ ಗ್ರಾತ್ರದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಪಿಒಪಿ ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಬಳಕೆಗೆ ಸರ್ಕಾರ ನಿಷೇಧ ಹೇರಿದ್ದು, ಹೀಗಾಗಿ ಜಿಲ್ಲೆಯ ಮಾರುಕಟ್ಟೆಯಲ್ಲಿ ಜೇಡಿಮ ಣ್ಣಿನಿಂದ ತಯಾರಿಸಿದ ಪರಿಸರ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ.
ಈ ಭಾರಿ ವಿಶೇಷವಾಗಿ ಸಾಯಿಬಾಬ, ಶ್ರೀರಾಮ, ಅಯ್ಯಪ್ಪ ಸ್ವಾಮಿ, ಆಂಜನೇಯ ಸೇರಿದಂತೆ ವಿವಿಧ ಆಕಾರದ ಗಣಪತಿ ಮೂರ್ತಿಗಳನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ಕುಟುಂಬಗಳು ಮೂರ್ತಿ ತಯಾರಿಸಿ ನಗರಕ್ಕೆ ತಂದಿದ್ದು, ಅರ್ಧ ಅಡಿಯಿಂದ ಹಿಡಿದು ಐದಾರು ಅಡಿಗಳವರೆಗೆ ಬಗೆ ಬಗೆಯ ಗಣೇಶ ಮೂರ್ತಿಗಳು ಮಾರಾಟಕ್ಕೆ ಇಡಲಾಗಿದೆ. ಪರಿಸರ ಸ್ನೇಹಿ ಗಣೇಶ, ಮಣ್ಣಿನ ಗಣೇಶ ವಿಗ್ರಹ ಮಾರಾಟ ಮಾಡಲಾಗುತ್ತಿತ್ತು. ೨೦೦ ರೂ. ನಿಂದ ಹಿಡಿದು ಸಾವಿರಾರು ರೂಪಾಯಿ ವರೆಗಿನ ಗಣೇಶನ ಮೂರ್ತಿ ಗಳು ಮಾರುಕಟ್ಟೆಗೆ ಬಂದಿವೆ. ತಮಗೆ ಬೇಕಾದ ಆಕೃತಿಯ ಗಣೇಶನ ವಿಗ್ರಹವನ್ನು ಮೊದಲೇ ಆರ್ಡರ್ ನೀಡಿ ಮಾಡಿಸಿಕೊಳ್ಳು ತ್ತಾರೆ. ಮನೆಗಳಲ್ಲಿ ಇಡುವ ಸಣ್ಣ ಗಣೇಶನ ವಿಗ್ರಹಗಳನ್ನು ಮಾರುಕಟ್ಟೆಯಿಂದ ಖರೀದಿಸುವವರೇ ಹೆಚ್ಚು. ಹಾಗಾಗಿ ಎರಡು ಮೂರು ದಿನಗಳಿಂದ ಗಣೇಶನ ವಿಗ್ರಹಗಳ ಖರೀದಿ ನಡೆಯುತ್ತಿದೆ. ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿಯೇ ವಿಗ್ರಹ ಮಾರಾಟ ನಡೆದವು.
ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಮನೆ, ದೇವಾಲಯಗಳಲ್ಲಿ, ವಾರ್ಡ್ಗಳಲ್ಲಿ ಅದ್ದೂರಿ, ಸಡಗರ, ಸಂಭ್ರಮದಿಂದ ಆಚರಿ ಸಲು ತಯಾರಿ ನಡೆಯುತ್ತಿದ್ದರೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆ ಗಳು ಪರಿಸರ ಸ್ನೇಹಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಜತೆಗೆ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲವು ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಲ್ಲೆಡೆ ಕೂಡ ಕಟ್ಟೆಚ್ಚರ ವಹಿಸಿದೆ.
ಹಬ್ಬಕ್ಕೆ ಇನ್ನೆರಡು ದಿನ ಇರುವಂ ತೆಯೇ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿ ಸಾಗಿದೆ. ಮಾರುಕಟ್ಟೆಯಲ್ಲಿ ಎಲ್ಲೆಲ್ಲಿ ಜನಜಂಗುಳಿ ಕಂಡು ಬಂದರೆ, ಈಗಾಗಲೇ ಅತ್ಯಾಕರ್ಷಕ ಗಣಪತಿ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ.
ಹೂವು ಹಣ್ಣು ಅಲ್ಪ ದುಬಾರಿ : ಹಬ್ಬಗಳು ಬಂದರೆ ಹೂವು ಹಣ್ಣುಗಳ ದರ ದುಪ್ಪಟ್ಟು ಆಗುತ್ತದೆ. ಆದರೆ ಈ ಬಾರಿ ದರ ವಿಪರೀತ ಏರಿಕೆಯಾಗಿರಲಿಲ್ಲ. ಆದರೂ ಕೂಡ ಮಲ್ಲಿಗೆ, ಕಾಕಡ, ಸೇವಂತಿಗೆ, ಕನಕಾಂಬರ ಸೇರಿದಂತೆ ಹೂಗಳ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. ಹಾಗೆಯೇ ಹಣ್ಣುಗಳ ಬೆಲೆಯಲ್ಲೂ ತುಸು ಏರಿಕೆ ಕಂಡಿದೆ. ಬಾಳೆಹಣ್ಣು ಕೆಜಿ ಒಂದಕ್ಕೆ ೮೦ ರಿಂದ ೧೦೦ ರೂ. ಇದ್ದರೆ. ಸೇಬು, ದಾಳಿಂಬೆ ೧೫೦ರಿಂದ ೨೦೦ ರೂ., ಮೂಸಂಬಿ, ಸೀತಾಫಲ ೬೦ ರೂ., ಪೇರಲೆ ೧೦೦ರೂ, ಕಿತ್ತಳೆ ೧೦೦ ರೂ, ಇದೆ. ಕಾಕಡ, ಮಲ್ಲಿಗೆ, ಚೆಂಡು ಹೂವು, ಸೇವಂತಿ ಸಹಿತ ಹೂವು ಮಾರೊಂದಕ್ಕೆ ೫೦ ರಿಂದ ೮೦ ರೂ.ಗೆ ಮಾರಾಟವಾಗುತ್ತಿದ್ದವು. ಗರಿಕೆ ಜೋಡಿ ಕಟ್ಟಿಗೆ ೨೦ ರೂ, ಬಾಳೆಕಂದು ಜೋಡಿಗೆ ೨೦ರಿಂದ ೪೦ ರೂ, ತುಳಸಿ ಮಾಲೆಗೆ ೬೦ ರೂ. ದರ ಇತ್ತು.