ಶಿವಮೊಗ್ಗ, ಸೆಪ್ಟೆಂಬರ್ ೦೬, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ೨೦೨೩-೨೪ನೇ ಸಾಲಿನ ಅಖಿಲ ಭಾರತ ನಾಗರೀಕ ಸೇವಾ ಕುಸ್ತಿ ಮತ್ತು ಕಬಡ್ಡಿ ಪಂದ್ಯಾವಳಿಗೆ ರಾಜ್ಯ ತಂಡದ ಆಯ್ಕೆ ಮಾಡುತ್ತಿದ್ದು, ಆಸಕ್ತರು ದಿ:೦೯/೦೯/೨೦೨೩ ರಂದು ದಾವಣಗೆರೆ ಮತ್ತು ತುಮಕೂರಿನಲ್ಲಿ ಏರ್ಪಡಿಸುವ ಆಯ್ಕೆ ಪಂದ್ಯಗಳಲ್ಲಿ ಭಾಗವಹಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕುಸ್ತಿ ಆಯ್ಕೆ ಪಂದ್ಯವು ಸೆ. ೦೯ ರಂದು ಬೆಳಗ್ಗೆ ೯.೦೦ ರಿಂದ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದು, ಸಂಪರ್ಕಿಸಬೇಕಾದ ತರಬೇತುದಾರು ವಿನೋದ್ಕುಮಾರ್ ಕೆ. ಮೊ.ಸಂ.:೮೯೭೧೩೮೮೧೪೩ ಮತ್ತು ತುಕಾರಾಮ್ ಮೊ.ಸಂ.: ೯೯೪೫೪೮೯೧೯೩.
ಕ್ರೀಡಾಪಟುಗಳು ದಾವಣಗೆರೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಲ್ಲಿ ವರದಿ ಮಾಡಿಕೊಳ್ಳುವುದು.
ಕಬಡ್ಡಿ ಆಯ್ಕೆ ಪಂದ್ಯವು ಸೆ. ೦೯ ಬೆಳಗ್ಗೆ ೦೯.೦೦ಕ್ಕೆ ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದು, ಸಂಪರ್ಕಿಸಬೇಕಾದ ತರಬೇತುದಾರರು ಇಸ್ಮಾಯಿಲ್
ಮೊ.ಸಂ.: ೯೯೮೦೫೮೮೪೧೫ ಮತ್ತು ಶ್ರೀಶೈಲ. ಕ್ರೀಡಾಪಟುಗಳು ತುಮಕೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಲ್ಲಿ ವರದಿ ಮಾಡಿಕೊಳ್ಳುವುದು.
೨೦೨೨-೨೩ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಆಸಕ್ತ ಕ್ರೀಡಾಪಟುಗಳು ಮೇಲ್ಕಂಡ ದಿನಾಂಕದಂದು ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.