ಶಿವಮೊಗ್ಗ, ಜು.31:
ಶಿವಮೊಗ್ಗ, ದಾವಣಗೆರೆ, ಮತ್ತು ದಾವಣಗೆರೆ ಜಿಲ್ಲಾ ಸಹಕಾರ ಹಾಲು ಒಕ್ಕೊಟದ ಆಡಳಿತ ಮಂಡಳಿ ಘೋಷಣೆಯಂತೆ ನಂದಿನಿ ಹಾಲು ಹಾಗೂ ಮೊಸರಿನ ಬೆಲೆ ಪ್ರತಿ ಲೀಟರ್ ಗೆ ಮೂರು ರೂ. ನಂತೆ ಹೆಚ್ಚಳ ಮಾಡಲಾಗಿದೆ.
ಈ ಹೆಚ್ಚಳದಂತೆ ವ್ಯಾಪ್ತಿಯ 1.50 ಲಕ್ಷ ರೈತ ಕುಟುಂಬಗಳಿಗೆ ತಲಾ ಪ್ರತಿ ಲೀಟರ್ ಗೆ ಮೂರು ರೂ ಹೆಚ್ಚಳ ಮಾಡಲಾಗಿದೆ ಎಂದು ಶಿಮುಲ್ ಅಧ್ಯಕ್ಷ ಶ್ರೀಪಾದ ರಾವ್ ಹಾಗೂ ಎಂ.ಡಿ. ಎಸ್ ಜಿ ಶೇಖರ್ ಇಂದು ಮದ್ಯಾಹ್ನ ಸುದ್ದಿ ಗೋಷ್ಟಿ ಯಲ್ಲಿ ತಿಳಿಸಿದರು.