ಶಿವಮೊಗ್ಗ:
ಸಮಾಜ ಸೇವಾ ಕಾರ್ಯಕ್ರಮಗಳನ್ನು ಪ್ರಮುಖ ಗುರಿಯಾಗಿಸಿಕೊಂಡಿರುವ ಶಿವಮೊಗ್ಗದ ಇನ್ನರ್ ವೀಲ್ ಕ್ಲಬ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆಯಾಗಿ ಇದೀಗ 100 ವರ್ಷ ಕಳೆದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಇತ್ತೀಚಿಗೆ ನಡೆದ ಶಿವಮೊಗ್ಗ ಇನ್ನರ್ ವೀಲ್ ಕ್ಲಬ್ ನ ಪದವಿ ಸ್ವೀಕಾರ ಸಮಾರಂಭದಲ್ಲಿ. ಎನ್. ಜಿ. ಉಷಾ ಉಡುಪ ಇವರು ಅಧ್ಯಕ್ಷ ಪದವಿ ಸ್ವೀಕಾರ ಮಾಡಿದರು.
ಕಾರ್ಯದರ್ಶಿಯಾಗಿ ದೀಪ ಚಂದ್ರನ್, ಸಹ ಕಾರ್ಯದರ್ಶಿಯಾಗಿ ಸುಮಲತಾ ಭೂಪಾಳಂ, ಖಜಾಂಚಿಯಾಗಿ ಯಶೋಧ ಶೇಖರ್, ಐ.ಎಸ್.ಓ. ಆಗಿ ಅನುಪಮ ಶಾಸ್ತ್ರಿ, ಬುಲೆಟಿನ್ ಸಂಪಾದಕರಾಗಿ ಸುನೀತಾ ಶ್ರೀಧರ್, ವೆಬ್ ಕೊಆರ್ಡಿನೇಟರ್ ಆಗಿ ಲಕ್ಷ್ಮಿ ಆನಂದ್, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕರಾಗಿ ಸುಪ್ರಿಯಾ ಶಾಸ್ತ್ರಿ ಆಯ್ಕೆಯಾಗಿದ್ದಾರೆ.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಇನ್ನರ್ ವೀಲ್ ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್ ಹಾಗೂ ಗೌರವ ಅತಿಥಿಗಳಾಗಿ ಮಾಜಿ ಜಿಲ್ಲಾ ಚೇರ್ಮನ್ ವಾರಿಜಾ ಜಗದೀಶ್ ಆಗಮಿಸಿದ್ದರು.