ಶಿವಮೊಗ್ಗ, ಅ.24:
ಶಿವಮೊಗ್ಗ ಕೇಂದ್ರ ಕಾರಾಗೃಹ ದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಶಿಕ್ಷಾ ಬಂಧಿಯೋರ್ವ ಜೈಲಿನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಮಂಜುನಾಥ್ (33) ಆತ್ಮಹತ್ಯೆ ಮಾಡಿಕೊಂಡ ಖೈದಿ.

ಮಂಜು


ಮೃತ ಮಂಜು ಸಾಗರ ಎ.ಕೆ. ಕಾಲೋನಿ ನಿವಾಸಿ ಎನ್ನಲಾಗಿದೆ. ದುರ್ಗಪ್ಪ ಎಂಬುವರ ಮಗ.


ನಿನ್ನೆ ಸಂಜೆ ಜೈಲಿನ ತುಂಗಾ ವಿಭಾಗದ ರೂಂ ನಂಬರ್ 35 ರ ಶೌಚಾಲಯದಲ್ಲಿ ಟವಲ್ ನಿಂದ ಮಂಜು ನೇಣು ಬಿಗಿದುಕೊಂಡಿದ್ದಾನೆ.
ತಕ್ಷಣ ಜೈಲು ಸಿಬ್ಬಂದಿಗಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವು.
ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ಪಂಚೆನಾಮೆ ಶವಪರೀಕ್ಷೆ ನಡೆಯುತ್ತಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!