ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ ೨೭ರಂದು ಉದ್ಘಾಟಿಸಿದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ ೧೧ರಿಂದ ವಿಮಾನ ಹಾರಾಟ ಆರಂಭಿಸಲು ಇಂಡಿಗೋ ಸಂಸ್ಥೆ ಮುಂದಾಗಿದೆ.


ಪ್ರಧಾನಿ ಮೋದಿ ಸೇನಾ ವಿಮಾನದಲ್ಲಿ ಬಂದಿಳಿಯುವ ಮೂಲಕ ಶಿವಮೊಗ್ಗ ಸಮೀಪ ಸೋಗಾನೆಯಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣ ಉದ್ಘಾಟಿಸಿದ್ದರು. ಆಗಸ್ಟ್ ೧೧ರಿಂ

ದ ವಿಮಾನ ಹಾರಾಟ ಆರಂಭಿಸಲು ಇಂಡಿಗೋ ಸಂಸ್ಥೆ ಮುಂದಾಗಿದ್ದು, ಇದಕ್ಕಾಗಿ ತಯಾರಿ ಮಾಡಿಕೊಳ್ಳಲಾಗಿದೆ.
ಸಂಸದ ಬಿ.ವೈ. ರಾಘವೇಂದ್ರ ಶೀಘ್ರವೇ ವಿಮಾನ ಹಾರಾಟಕ್ಕೆ ಮುಂದಾಗಬೇಕೆಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಂಡಿಗೋ ವಿಮಾನಯಾನ ಸಂಸ್ಥೆ ಸಿದ್ಧತೆ ಕೈಗೊಂಡಿದೆ. ಆಗಸ್ಟ್ ೧೧ ರಿಂದ ಶಿವಮೊಗ್ಗ ಬೆಂಗಳೂರು ನಡುವೆ

೭೮ ಆಸನ ಸಾಮರ್ಥ್ಯದ ವಿಮಾನಯಾನ ಶುರುವಾಗಲಿದೆ.
ಬೆಳಗ್ಗೆ ೯ ಗಂಟೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ ಬೆಳಗ್ಗೆ ೧೦.೩೦ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಮಧ್ಯಾಹ್ನ ೧೨ ಗಂಟೆಗೆ ಶಿವಮೊಗ್ಗದಿಂದ ಹೊರಟು ೧.೩೦ಕ್ಕೆ ಬೆಂಗಳೂರು ತಲುಪಲಿದೆ.

By admin

ನಿಮ್ಮದೊಂದು ಉತ್ತರ

error: Content is protected !!