*
ಶಿವಮೊಗ್ಗ,
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಸಾಗರ ಇಲ್ಲಿ ಆಗಸ್ಟ್-2023 ನೇ ಸಾಲಿಗೆ ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಕೆಳಕಂಡ ವಿವಿಧ ವೃತ್ತಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎಸ್ಎಸ್ಎಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಮೆಕ್ಯಾನಿಕ್ ಮೋಟಾರ್ ವೆಹಿಕಲ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್, ಐಸಿಟಿಎಸ್ಎಂ,
ಅಡ್ವಾನ್ಸ್ ಸಿಎನ್ಸಿ ಮೆಷಿನಿಂಗ್, ಮೆಕ್ಯಾನಿಕ್ ಡೀಸೆಲ್, ಇಂಡಸ್ಟ್ರಿಯಲ್ ರೋಬೊಟಿಕ್ಸ್ & ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಹಾಗೂ 8ನೇ ತರಗತಿ ಪಾಸ್ ಹಾಗೂ ಎಸ್ಎಸ್ಎಲ್ಸಿ ಪಾಸ್/ಫೇಲ್ ಆದ ಅಭ್ಯರ್ಥಿಗಳಿಗೆ ಡ್ರೆಸ್ ಮೇಕಿಂಗ್, ವೆಲ್ಡರ್ ವೃತ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜೂನ್ 07 ಕಡೆಯ ದಿನವಾಗಿದ್ದು, ಇಲಾಖೆಯ ವೆಬ್ಸೈಟ್ www.cite.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದೆಂದು ಸಗರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ