ಶಿವಮೊಗ್ಗ, ಏ.24:

ನೂರಕ್ಕೆ ನೂರು ಭಾಗ ಭಾರತೀಯ ಜನತಾ ಪಕ್ಷದ ರಕ್ತದ ಗುಣ ಹೊಂದಿರುವ ಜಗದೀಶ್ ಶೆಟ್ಟರ್ ಮತ್ತೆ ಪಕ್ಷಕ್ಕೆ ವಾಪಸ್ ಬರುತ್ತಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಅವರು ಇರಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಹೇಳಿದರು.


ಅವರು ಇಂದು ಮದ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ಹಾಗೇನಾದರೂ ಅವರ ಮಾತಿನಂತೆ ಬಂದರೆ ನೀವು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಯಾವ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತೀರಿ. ಅವರು ಗೋವುಗಳನ್ನು ಕಡಿಯುವುದಕ್ಕೆ ನಾವು ತಂದಿರುವ ಕಾಯ್ದೆಯನ್ನು ರದ್ದುಮಾಡುವುದಕ್ಕೆ ಸದನದ ಅನುಮತಿ ಕೇಳುತ್ತಾರೆ. ಆಗ ನೀವು ಕೈ ಎತ್ತುತ್ತೀರಾ.? ಈ ಪ್ರಶ್ನಗೆ ಈಗಲೇ ಉತ್ತರ ನೀಡಿ ಎಂದರು.


ಹಿಂದೂ ಯುವಕರ ಕೊಲೆಗೆ ಕಾರಣರಾದ ಪಿಎಫ್‌ಐನ್ನು ನಾವು ಬ್ಯಾನ್ ಮಾಡಿದ್ದೀವಿ. ಅದನ್ನು ಮತ್ತೆ ಉಳಿಸುವ ಮೂಲಕ ಹಿಂದೂಗಳ ಕೊಲೆಗೆ ನೀವು ಕಾರಣಕರ್ತರಾಗುತ್ತೀರಾ. ನೀವು ಕಾಂಗ್ರೆಸ್ ಸೇರ್ಪಡೆಯ ಕ್ಷಣದಲ್ಲಿ ಮುಸ್ಲಿಂ ಟೋಪಿ ಹಾಕಿಕೊಂಡು ತೆಗೆಯಿರಿ. ನಿಮ್ಮ ತಲೆಯಲ್ಲಿ ಅದು ಇರಲು ಸಾದ್ಯವಿಲ್ಲ. ಅಪ್ಪಟ್ಟ ಹಿಂದೂತ್ವ ವಾದಿ ಹಾಗೂ ಭಾರತೀಯ ಜನತಾ ಪಕ್ಷದ ರೂವಾರಿಯಾದ ನಿಮಗೆ ನಿಮ್ಮ ತಂದೆ ಹೇಳಿಕೊಟ್ಟ ಧರ್ಮ, ಸಂಸ್ಕೃತಿ, ಪ್ರೀತಿ ಇದೆ ಅಲ್ಲವೇ.? ಈ ಮಣ್ಣಿನ ಗುಣ ಹೊಂದಿರುವ ಬಿಜೆಪಿಯನ್ನು ನೀವು ಹೇಗೆ ತಾನೆ ಬಿಡಲು ಸಾಧ್ಯ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!