ಶಿವಮೊಗ್ಗ, ಅ.01:
ಗಣಪನ ಹೊಟ್ಟೆ ಮೇಲೆ ನಾಗರ ಹಾವೊಂದು ಕುಳಿತಕೊಂಡಿದ್ದ ಘಟನೆ ಇಂದು ಶಿವಮೊಗ್ಗದ ಹರಕೆರೆ ಶ್ರೀ ರಾಮೇಶ್ವರ ದೇವಾಲಯದಲ್ಲಿ ನಡೆದಿದೆ. ವಿಘ್ನವಿನಾಶಕನ ಹೊಟ್ಟೆ ಮೇಲೆ ಸುಮಾರು ಮೂರೂವರೆ ಅಡಿ ಉದ್ದದ ನಾಗರಹಾವು ಇಂದು ಬೆಳಿಗ್ಗೆ ಕುಳಿತಿದೆ.
ಕೂಡಲೇ ಅರ್ಚಕರು ಸ್ನೇಕ್ ಕಿರಣ್ ರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಕ್ಷಣ ಸ್ಥಳಕ್ಕೆ ಬಂದ ಕಿರಣ್ ದೇವರ ಮೇಲಿದ್ದ ಹಾವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಹಿಡಿದಿದ್ದಾರೆ. ನಂತರ ಕಾಡಿಗೆ ಕಳುಹಿಸುವ ಪ್ರಕ್ರಿಯೆ ನಡೆಸಿದ್ದಾರೆ. ಅರ್ಚಕರು ಹೇಳುವ ಪ್ರಕಾರ ವಿಘ್ನವಿನಾಶಕ ಮೇಲೆ ನಾಗರಹಾವು ಕುಳಿತಿದ್ದು, ಅದೃಷ್ಟವೆಂದು ಹೇಳುತ್ತಾರೆ. ಹರಕೆರೆಯ ಶ್ರೀರಾಮೇಶ್ವರ ದೇವಾಲಯದಲ್ಲಿ ಇಂದು ಇದೇ ಸಂಭ್ರಮ ಕಂಡುಬಂದಿತು.