ಶಿವಮೊಗ್ಗ ಸಮೀಪದ ಹಾರನಹಳ್ಳಿಯಲ್ಲಿ ರೋಚಕ ಘಟನೆ, ಕೊನೆಗೂ ಕಾಪಾಡಿದ ಭಗವಂತ, ಜನರ ಕೋರಿಕೆಗೆ ಅಸ್ತು
ಶಿವಮೊಗ್ಗ,ಮಾ.05 :
ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ತೆಂಗಿನ ಮರವನ್ನು ಮಿಷನ್ ಮೂಲಕ ಹತ್ತಲು ಹೋದ ವ್ಯಕ್ತಿ ಮಿಷನ್ ನ ಬೆಲ್ಟ್ ಮುರಿದು ಮರದ ಮಧ್ಯೆದಲ್ಲಿ (ಅಂದರೆ 40 ಅಡಿ) ಸಿಲುಕಿಕೊಂಡು ನರಕಯಾತನೆ ಅನುಭವಿಸಿದ ಘಟನೆ ವರದಿಯಾಗಿದೆ.
ಪ್ರಕರಣ ವಿವರ :
ಬಾಳೆಕೊಪ್ಪದ ನಿವಾಸಿ ಬಸವರಾಜ್ ಅವರು ಹಾರನಹಳ್ಳಿ ಗ್ರಾಮದಲ್ಲಿ ಮನೆಯ ಮುಂಭಾಗದಲ್ಲಿ.. ಹಿತ್ತಲಲ್ಲಿ ಬೃಹದಕಾರವಾಗಿ ಬೆಳೆದಿರುವ ತೆಂಗಿನ ಮರದ ಕಾಯಿಗಳನ್ನು ಕಿಳಲು ಹೋಗಿದ್ದಾರೆ.. ಎರಡು ಮೂರು ಮರಗಳನ್ನು ಹತ್ತಿ ತೆಂಗಿನಕಾಯಿಗಳನ್ನು ಕಿತ್ತು ಮೂರನೇ ಮರವನ್ನು ಹತ್ತಲು ಹೋಗಿದ್ದಾರೆ. 60 ರಿಂದ 70 ಅಡಿ ಉದ್ದದ ತೆಂಗಿನ ಮರವನ್ನು ಹತ್ತುವಾಗ ಮದ್ಯದಲ್ಲಿ ತೆಂಗಿನ ಮರ ಹತ್ತುವ ಮಿಷನ್ ನ ಬೆಲ್ಟ್ ಮುರಿದಿದ್ದು, ಎರಡು ಕಾಲು ಮೇಲಾಗಿ ತಲೆ ಕೇಳಗಾಗಿದೆ. ಆತ ಒಂದು ಗಂಟೆಗಳ ಕಾಲ ನರಕ ಯಾತನೆ ಅನುಭವಿಸಿದ್ದಾನೆ.
ಬದುಕುಳಿದಿದ್ದು ಹೇಗೆ…?
ಮರದ ಮಧ್ಯೆ ಸಿಲುಕಿ ಹಾಕಿಕೊಂಡಿದ್ದ ಬಸವರಾಜನನ್ನು ಗ್ರಾಮಸ್ಥರು, ಯುವಕರು ಗಮನಿಸಿ ಗ್ರಾಮದಲ್ಲೆ ಇದ್ದ ಕ್ರೈನ್ ಬಳಸಿ ನಿಧಾನವಾಗಿ ಕೆಳಗಿಸಿದ್ದಾರೆ. ಪ್ರಜ್ಞೆ ತಪ್ಪಿದ ಬಸವರಾಜ್ ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಕ್ರೈನ್ ನಿಂದ ಕೆಳಗಿಸಿದಾಗ ಅಲ್ಲಿ ನೆರೆದಿದ್ದ ಸಾವಿರಾರು ಜನರು ಕ್ರೈನ್ ಮಾಲೀಕರಿಗೆ ಧನ್ಯವಾದದ ಜೊತೆ ಹಣವನ್ನು ಸಂಗ್ರಹಿಸಿ ನೋಡಿದ್ದಾರೆ.(ಸಂ)
ಶಿವಮೊಗ್ಗ / ತೆಂಗಿನ ಮರದ ಮೇಲೆ ನೇತಾಡಿದಾತನಿಗೆ ಕೊನೆಗೂ ಜನರೇ ಕಾಪಾಡಿದರು…, ಗ್ರೇಟ್ ಗಾಡ್