ಕಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ಸ್ ಭತ್ಯೆಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕರ್ನಾಟಕ ಕ.ಸ.ಪ.ಮಿ.ವಿ. ವಿಶ್ವವಿದ್ಯಾಲಯ ಬೀದರ್ನ ವಿದ್ಯಾರ್ಥಿಗಳು ಬಿವಿಎಸ್ ಮತ್ತು ಎಐಎಸ್ ಪದವಿಯ ಅಂತಿಮ ಶೈಕ್ಷಣಿಕ ಭಾಗವಾದ ಒಂದು ವರ್ಷದ ಇಂಟರ್ಶಿಪ್ ಕಾರ್ಯಕ್ರಮವನ್ನು ರಾಜ್ಯದ ಹಾಗೂ ಹೊರರಾಜ್ಯದ ಹಲವಾರು ಜಿಲ್ಲಾ ಆಸ್ಪತ್ರೆಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಮಾಡಬೇಕಾಗಿದ್ದು, ಇಂಟರ್ ವಿದ್ಯಾರ್ಥಿಗಳಿಗೆ ಕಳೆದ ೮ ವರ್ಷಗಳಿಂದ ರೂ.೧೪ ಸಾವಿರ ನೀಡುತ್ತಾ ಬಂದಿದೆ. ಈ ವೇತನದಲ್ಲೆ ಆಯಾ ತಿಂಗಳುಗಳ ಖರ್ಚುಗಳು, ಊಟ,ವಸತಿ, ಸಾರಿಗೆ, ಓಡಾಟದ ವೆಚ್ಚ ಹಾಗೂ ವ್ಯಾಸಂಗಕ್ಕೆ ಸಂಬಂಧಿಸಿದ ಖರ್ಚುಗಳನ್ನು ಭರಿಸಬೇಕಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ನಿತ್ಯ ಬಳಕೆಯ ವಸ್ತುಗಳು ಹಾಗೂ ಸೌಲಭ್ಯಗಳ ದರಗಳು ಹೆಚ್ಚಿದ್ದು, ಮಾಸಿಕ ೨೦ ಸಾವಿರಕ್ಕೂ ಅಧಿಕ ಖರ್ಚು ಬರುತ್ತದೆ. ಇದಲ್ಲದೆ ವಿವಿಗೆ ಕೂಡ ವಾರ್ಷಿಕ ಸುಮಾರು ೪೫ ಸಾವಿರ ರೂ.ಗಳ ಶುಲ್ಕವನ್ನು ಪಾವತಿಸಬೇಕಾಗಿದೆ. ಇಂಟರ್ ಅವಧಿಯಲ್ಲಿ ಮಾಸಿಕ ಭತ್ಯೆ ನೀಡುವುದರಿಂದ ಯಾವುದೇ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ನಮ್ಮ ವಿಶ್ವವಿದ್ಯಾಲಯದಲ್ಲಿ ಶೇ.ಎ.ಪಿ.ಕೆ ಅವಕಾಶವನ್ನು ಬಡ ಹಾಗೂ ರೈತಾಪಿ ಕುಟುಂಬಗಳಿಗೆ ನೀಡಬೇಕಾದ ನಿಯ ಮವಿರುವುದರಿಂದ ಪ್ರಸ್ತುತ ತಗಲುತ್ತಿರುವ ಅಧಿಕ ವೆಚ್ಚ ವನ್ನು ಭರಿಸುವುದು ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿದೆ.

ಈ ಕಾರಣಕ್ಕಾಗಿ ಇಂಟರ್ಶಿಪ್ ಭತ್ಯೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಹಲವುಬಾರಿ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ಕಿರಿಯ ಮಾನವ ವೈದ್ಯಕೀಯ, ವಿದ್ಯಾರ್ಥಿಗಳ, ಇಂಟರ್ಶಿಪ್ ಭತ್ಯೆಯನ್ನು ೩೦ ಸಾವಿರ ರೂ.ಗಳಿಗೆ ಏರಿಸಿರುವ ಹಿನ್ನಲೆಯಲ್ಲಿ ಮೂಕ ಪ್ರಾಣಿಗಳ ಸೇವೆಯಲ್ಲಿ ನಿರತರಾದ ಹಿರಿಯ ಪಶುವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ಶಿಪ್ ಮಾಸಿಕ ಭತ್ಯೆಯನ್ನು ಕಿರಿಯ ಮಾನವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಾನವಾಗಿ ನೀಡುವಂತೆ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರೋಹಿತ್, ನವೀನ್, ಯಶಸ್ವಿ, ರಕ್ಷಿತ್, ಹೇಮಂತ್ ಮೊದಲಾದವರಿದ್ದರು.