ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉದ್ಯೋಗಿಗಳು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಓಡಾಡುತ್ತಿದ್ದು, ಇದು ನಕಲಿಯಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.


ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಏರ್ ಹೋಸ್ಟೆಸ್, ಬಿಸನಸ್ ಡೆವಲೆಪ್‌ಮೆಂಟ್ ಮ್ಯಾನೇ ಜರ್, ಏರ್‌ಲೈನ್ ಎಕ್ಸಿಕ್ಯೂಟೀವ್, ಸೆಕ್ಯೂರಿಟಿ ಗಾರ್ಡ್, ಹೆಲ್ಪರ‍್ಸ್, ಕ್ಲೀನರ‍್ಸ್, ಟೀಂ ಮೆಂಬರ‍್ಸ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಡಿಪ್ಲೋಮೊ ಆದ ೪೦ ವರ್ಷ ಒಳಗಿನ ಯುವಕ-ಯುವತಿಯರು ಬೇಕಾ ಗಿದ್ದಾರೆ

ಎಂದು shimogaairporthiring@gmail.comಇ-ಮೇಲ್ ನಕಲಿ ಐಡಿ ಮೂಲಕ ಜಾಹಿರಾತು ನೀಡುತ್ತಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಲಾಗಿಲ್ಲ ಇದು ನಕಲಿಯಾಗಿದ್ದು, ಸಾರ್ವಜನಿಕರು ಎಚ್ಚರವಹಿಸುವಂತೆ ಅವರು ಕೋರಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!