ಶಿವಮೊಗ್ಗ ಜ.11:
ಶಿವಮೊಗ್ಗ ತಾಲ್ಲೂಕಿನ ಮಂಡ್ಲಿ ವಿ.ವಿ.ಕೇಂದ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್ಸಿಟಿ ಕಾಮಗಾರಿ ಕೈಗೊಂಡಿರುವುದರಿಂದ ಕೆಳಕಂಡ ಗ್ರಾಮಗಳಲ್ಲಿ ಜ.12 ರಂದು ಬೆಳಿಗ್ಗೆ 09 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಇಲಿಯಾಜ್ನಗರ 4 ರಿಂದ 13ನೇ ಕ್ರಾಸ್, ಫಾರೂಕ್ಯ ಶಾದಿಮಹಲ್, ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರ, ಭವಾನಿ ಲೇಔಟ್, ಜಿ.ಎಸ್.ಕ್ಯಾಸ್ಟಿಂಗ್, ಲಾರಿ ಗ್ಯಾರೇಜ್, ಕೆಳಗಿನ ತುಂಗಾನಗರ, ಮಂಡಕ್ಕಿಭಟ್ಟಿ, ಟಿಪ್ಪುನಗರ, ಮಂಜುನಾಥ ಬಡಾವಣೆ, ದುರ್ಗಿಗುಡಿ ಮಾರ್ಗ, ಖಾಜಿನಗರ 80 ಅಡಿರಸ್ತೆ, ಕಾಮತ್ ಲೇಔಟ್, ಮಲ್ಲಿಕಾರ್ಜುನ ಬಡಾವಣೆ, ಮುಳಘಟ್ಟ, ಆನಂದರಾವ್ ಬಡಾವಣೆ, ಆರ್.ಎಂ.ಎಲ್.ನಗರ 1ನೇ ಮತ್ತು 2ನೇ ಹಂತ, ಬುದ್ಧನಗರ, ಕೆ.ಎಸ್.ಆರ್.ಟಿ.ಸಿ. ಡಿಪೋ, ಮಾರ್ನಮಿಬೈಲು, ಖಾಸಗಿ ಬಸ್ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶ, ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ, ಐಹೊಳೆ, ಅಗಸವಳ್ಳಿ ಕಲ್ಲೂರು ಗೋವಿಂದಪುರ, ಅನುಪಿನಕಟ್ಟೆ, ಪುರದಾಳು, ರಾಮಿನಕೊಪ್ಪ, ಮೈಲಾರಪ್ಪನ ಕ್ಯಾಂಪ್, ಹನುಮಂತಾಪುರ, ಶರಾವತಿನಗರ, ಶಾರದ ಕಾಲೋನಿ ಹಾಗೂ ಸುತ್ತಮುತ್ತಲಿನ ಐ.ಪಿ.ಲಿಮಿಟ್ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಶಿಕಾರಿಪುರ ತಾಲೂಕು ವಿದ್ಯುತ್ ಪ್ರಸರಣ ಮಾರ್ಗದ ಭೂನಷ್ಟ ಪರಿಹಾರ ನಿಗದಿ ಸಭೆ
ಶಿವಮೊಗ್ಗ ಜ. 11:
ವಿದ್ಯುತ್ ಪ್ರಸರಣ ನಿಗಮವು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಬನ್ನೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರು 1 x 10 ಎಂ.ವಿ.ಎ 110/11 ಕೆ.ವಿ. ವಿದ್ಯುತ್ ಉಪಕೇಂದ್ರಕ್ಕೆ ಈಗಿರುವ ಸಂಡ 110/11 ಕೆವಿ. ವಿದ್ಯುತ್ ಉಪಕೇಂದ್ರದಿಂದ ಸುಮಾರು 12.748 ಕಿ.ಮೀ. ಉದ್ದದ 110 ಕೆವಿ ವಿದ್ಯುತ್ ಪ್ರಸರಣ ಮಾರ್ಗವನ್ನು ನೂತನವಾಗಿ ನಿರ್ಮಿಸುವ ಕಾಮಗಾರಿಯಲ್ಲಿ ಬರುವ ಮಾರ್ಗದ ಕಾರಿಡಾರ್ ಮತ್ತು ಗೋಪುರದ ತಳಪಾಯದ ಭೂನಷ್ಟ ಪರಿಹಾರವನ್ನು ನಿಗಧಿಪಡಿಸಲು ಸಾಗರ ಉಪವಿಭಾಗಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ಜ.17 ರಂದು ಸಂಜೆ 4.00ಕ್ಕೆ ಶಿಕಾರಿಪುರ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
