ಶಿವಮೊಗ್ಗ, ಜ.8:

ಶಿವಮೊಗ್ಗದಲ್ಲಿ ಇಂದಿನಿಂದ ನಡೆಯಲಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವಕ್ಕೆ ಆಗಮಿಸಿರುವ ರಾಜ್ಯದ ಎಲ್ಲಾ ಪ್ರತಿಭೆಗಳಿಗೆ ಹಾಗೂ ಅವರ ಪೋಷಕರಿಗೆ ಸಿಹಿಮೊಗೆಯ ಪ್ರೀತಿಯ ಆತಿಥ್ಯ ನೀಡಲಾಯಿತು.


ನಿನ್ನೆ ರಾತ್ರಿ ಸುಮಾರು 8.30 ಕ್ಕೆ 22 ಜಿಲ್ಲೆಗಳಿಂದ ಸುಮಾರು 830 ವಿದ್ಯಾರ್ಥಿಗಳು ಆಗಮಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳಾದ ಡಾ ಸೆಲ್ವಾಮಣಿ ಅವರು ಎಲ್ಲ ವ್ಯವಸ್ಥೆಗಳನ್ನು ಪರಿಶೀಲಿಸಿ ಊಟದ ರುಚಿ ಕೂಡ ಪರಿಶೀಲಿಸಿ ಮತ್ತು ವಾಸ್ತವ್ಯ ಎಲ್ಲ ಸ್ಪರ್ಧೆ ವೇದಿಕೆಗಳ ಸಿದ್ಧತೆಗಳನ್ನು ಪರಿಶೀಲಿಸಿದರು. ಮಕ್ಕಳಿಗೆ ಸಾನಿಟರಿ ಕಿಟ್ ಗಳ ವಿವರಣೆ ಬಗ್ಗೆ ಪರಿಶೀಲಿಸಿದರು.


ವಸತಿ ಸ್ಥಳಗಳ ಭೇಟಿ ನೀಡಿ ಪರಿಶೀಲಿಸಿ ಎಲ್ಲ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಇಓ ಜಿಲ್ಲಾ ಪಂಚಾಯತ್ ಡಿಡಿಪಿಐ ಪರಮೇಶ್ವರಪ್ಪ ، ಸಹ ನಿರ್ದೇಶಕರಾದ ಮಂಜುನಾಥ್ ಎಚ್ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಎಲ್ಲ ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ಎಲ್ಲ ಸಮಿತಿಗಳ ಸಂಚಾಲಕರು, ಸದಸ್ಯರು, ಪೋಷಕರು ಉಪಸ್ಥಿತರಿದ್ದರು.


ಸ್ಪರ್ಧೆಗೆ ಬಂದಿರುವ ಎಲ್ಲ ವಿದ್ಯಾರ್ಥಿಗಳ ಕ್ಷೇಮದ ಹಾಗೂ
ಸುರಕ್ಷತೆ ಬಗ್ಗೆ ಗಮನಿಸುವುದು. ಎಲ್ಲಾ ಸ್ಪರ್ಧಿಗಳು ವಾಪಸ್ ಹೋಗುವವರೆಗೂ ಜವಾಬ್ದಾರಿ ತೆಗೆದುಕೊಳ್ಳುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!