ಫೋಟೋಗ್ರಾಫರ್ನ ಜೀವನಕಥೆಯ ಚಿತ್ರ `ಶ್ರೀ ಬಾಲಾಜಿ ಫೋಟೊ ಸ್ಟುಡಿಯೋ’ ಚಲನಚಿತ್ರವು ಜ.6ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ಹಾಗೂ ನಿರ್ದೇಶಕ ರಾಜೀವ್ ಧ್ರುವ ತಿಳಿಸಿದರು.

ಅವರು ಇಂದು ಮೀಡಿಯಾ ಹೌಸ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ ಫೋಟೋಗ್ರಾಫರ್ ಕುರಿತು ಚಿತ್ರ ಬಂದಿರಲಿಲ್ಲ. ಕ್ಯಾಮೆರಾ ಹಾಗೂ ಸ್ಟುಡಿಯೋದಲ್ಲಿ ನಡೆಯುವ ಘಟನೆಗಳನ್ನು ಆದರಿಸಿ ಚಿತ್ರ ನಿರ್ಮಿಸಲಾಗಿದೆ ಎಂದರು.

ವಿಭಿನ್ನ ಕಥೆಯುಳ್ಳ ಈ ಚಿತ್ರವನ್ನು ಮಲೆನಾಡು, ಉತ್ತರಕನ್ನಡ ಜಿಲ್ಲೆಯ ಹಲವೆಡೆ ಶೇ.95ರಷ್ಟು ಚಿತ್ರೀಕರಣ ಮಾಡಲಾಗಿದೆ. ಸುಮಾರು 47 ಕ್ಕೂ ಹೆಚ್ಚು ಕಲಾವಿದರಿದ್ದು, ನಾಯಕ ಹಾಗೂ ನಾಯಕಿ ಪಾತ್ರವಿಲ್ಲ. ಎಲ್ಲರೂ ಆಯಾ ಸಂದರ್ಭಕ್ಕೆ ನಟನೆ ಮಾಡಿದ್ದಾರೆ. ಉತ್ತರ ಕನ್ನಡದ ಸವಿಯಾದ ಸ್ಪಷ್ಟ ಕನ್ನಡ ಭಾಷೆ ಬಳಸಲಾಗಿದೆ. ಒಂದು ಮುದ್ದಾದ ಪ್ರೇಮ ಕತೆ ಮುಜುಗರವಿಲ್ಲದೇ ನೋಡಬಹುದಾಗಿದೆ. ಹಾಗೂ ಒಬ್ಬ ಫೋಟೋ ಗ್ರಾಪರ್ ಜೀವನದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಎಂದರು.

ಚಿತ್ರದಲ್ಲಿ ಎರಡು ಹಾಡುಗಳಿದ್ದು, ಯಾವುದೇ ಹೊಡೆದಾಟ, ಅತಿರೇಕ ಇರುವುದಿಲ್ಲ. 2 ಗಂಟೆ 27 ನಿಮಿಷದ ಈ ಚಿತ್ರ ಹೊಸ ವರ್ಷಕ್ಕೆ ಹೊಸತನ ತರುತ್ತದೆ ಎಂಬ ನಂಬಿಕೆ ಇದ್ದು, ಪ್ರೇಕ್ಷಕರು ಕುಟುಂಬ ಸಮೇತರಾಗಿ ಬಂದು ಚಿತ್ರ ನೋಡಿ ಶುಭ ಹಾರೈಸಬೇಕೆಂದು ಮನವಿ ಮಾಡಿದರು

.

ನಾನು ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ನಟನಾಗಿ ಅಭಿನಯಿಸಿದ್ದು, 2019 ರಲ್ಲಿ ಮುಕ್ತಾಯವಾದ ಈ ಧಾರಾವಾಹಿ ನಂತರ ಚಲನಚಿತ್ರದಲ್ಲಿ ಭಾಗವಹಿಸಬೇಕೆಂಬ ಅಭಿಲಾಷೆಯಿಂದ ಈ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಟ ಸಂಪತ್ ಜಯರಾಮ್, ರವಿ ಸಾಲಿಯಾನ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!