ಈಗಿನ ಚುನಾಯಿತ ಪ್ರತಿನಿಧಿಗಳಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತ ಕಾರ್ಯ ಮಾದರಿಯಾಗಬೇಕು ಎಂದು ಸಂಸದರಾದ ಬಿ. ವೈ ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ ನಗರದ ವಿನಾಯಕ ನಗರ ಹನುಮಂತ ನಗರ ವಾರ್ಡ್ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮೇಯರ್ ಸ್ಥಾನದಲ್ಲಿ ಇರುವವರು ತಮ್ಮ ಅವಧಿಯ ನಂತರ ಸ್ಥಾನವನ್ನು ಬಿಡಲು ಒಪ್ಪುವುದಿಲ್ಲ. ಆದರೆ ಪ್ರಧಾನಿ ಸ್ಥಾನದಲ್ಲಿದ್ದಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕೇವಲ ಒಂದು ಸಂಸದರಾದ ಹಿನ್ನಡೆ ಆದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನನಗೆ ಅಧಿಕಾರಕಿಂತ ಬಿಜೆಪಿಯ ಕಾಯಕರ್ತ ಶಾಶ್ವತ ಸ್ಥಾನ ಇದೆ ಎಂದು ತಿಳಿಸಿ ಉತ್ತಮ ಜನಪರ ಕಾರ್ಯ ಮಾಡಿದ್ದಾರೆ ಎಂದರು.

ಶಾಸಕ ಕೆ.ಎಸ್ ಈಶ್ವರಪ್ಪ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್, ಪಾಲಿಕೆ ಮಹಾಪೌರ ಶಿವಕುಮಾರ್, ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಸೂಡಾ ಅಧ್ಯಕ್ಷ ನಾಗರಾಜ್, ಸೂಡಾ ಮಾಜಿ ಅಧ್ಯಕ್ಷ ಜ್ಯೋತಿ ಪ್ರಕಾಶ್, ಪಾಲಿಕೆಯ ಸದಸ್ಯ ವಿಶ್ವಾಸ್, ರಾಹುಲ್ ಬಿದರೆ, ಆರತಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!