ಶಿವಮೊಗ್ಗ : ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಿದ ಮಹಾನಗರಪಾಲಿಕೆ ಸದಸ್ಯ ಶಾಮೀರ್ ಖಾನ್ ಹಾಗೂ ಅವರ ಪತ್ನಿ ಮಾಜಿ ಮೇಯರ್ ಖುರ್ಷಿದಾ ಬಾನುರನ್ನು ಬಂಧಿಸುವಂತೆ ಆಗ್ರಹಿಸಿ ಯುವಮೋರ್ಚಾ ವತಿಯಿಂದ ನಗರದ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು
.
ಮಹಾನಗರ ಪಾಲಿಕೆಯ ಸದಸ್ಯ ಶಾಮೀರ್ ಖಾನ್ ಹಾಗೂ ಅವರ ಪತ್ನಿ ಖುರ್ಷಿದಾ ಬಾನು ಶಿವಮೊಗ್ಗ ನಗರದ ಟಿಪ್ಪು ನಗರದಲ್ಲಿ ದನದ ಮಾಂಸವನ್ನು ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾಯಿತ ಜನಪ್ರತಿನಿಧಿಯಾಗಿ ಇವರು ನಡೆಸಿದ ಈ ಒಂದು ಕೃತ್ಯ ಸಾರ್ವಜನಿಕರ ಭಾವನೆಗೆ ಧಕ್ಕೆ ತಂದಿದೆ. ಇವರಿಬ್ಬರ ಮೇಲೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದ್ದರೂ ಸಹ ಇದುವರೆಗೂ ಬಂಧಿಸಿಲ್ಲ. ಆದ್ದರಿಂದ ಈ ಕೂಡಲೇ ಅವರಿಬ್ಬರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಸುವರ್ಣ, ಸುರೇಖಾ ಮುರುಳಿಧರ್, ಎಂ.ಬಿ. ಹರಿಕೃಷ್ಣ, ಜಗನ್ನಾಥ್, ಅಭಿಷೇಕ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.