ಶಿವಮೊಗ್ಗ: ನಮ್ಮ ಶಿವಮೊಗ್ಗ ಟಿವಿ ವತಿಯಿಂದ ಯಕ್ಷಗಾನ ಕಲಾವಿದ ವಿದ್ವಾನ್ ದತ್ತಮೂರ್ತಿ ಭಟ್ ಅವರ ಸಹಯೋಗದಲ್ಲಿ ಸೆ.೨೦ರ ಸಂಜೆ ೬ ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ೩ ಗಂಟೆಗಳ ಕಾಲ “ಗದಾಯುದ್ದ-ರಕ್ತರಾತ್ರಿ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವನ್ನು ಆಯೋಜಿಸಲಾಗಿದೆ. ಎಂದು ವಿದ್ವಾನ್ ದತ್ತಮೂರ್ತಿ ಭಟ್ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವು ವಿಭಿನ್ನತೆಯಿಂದ ಕೂಡಿದ್ದು, ಯಕ್ಷಗಾನ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಬದಲಾಗಿ ನಮ್ಮ ಶಿವಮೊಗ್ಗ ಟಿವಿಯಲ್ಲಿ ನೇರ ಪ್ರಸಾರದ ಮೂಲಕ ಜನರಿಗೆ ಮತ್ತು ಕಲಾಭಿಮಾನಿಗಳಿಗೆ ತಲುಪಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮ ಕೇವಲ ಟಿವಿಯಲ್ಲಿ ಮಾತ್ರ ಪ್ರಸಾರವಾಗದೇ ಯುಟ್ಯೂಬ್, ಫೇಸ್ ಬುಕ್ ಮೂಲಕವೂ ಕೂಡ ಯಕ್ಷಗಾನ ಪ್ರೀಯರನ್ನು ತಲುಪಲಿದೆ ಎಂದರು.
ಕಾರ್ಯಕ್ರಮವನ್ನು ಅವದೂತರಾದ ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಉದ್ಘಾಟಿಸಲಿದ್ದು, ಕಲಾವಿದರಾದ ರಾಘವೇಂದ್ರ ಆಚಾರ್ಯ, ವಿದ್ಯಾಧರರಾವ್ ಜಲವಳ್ಳಿ, ಮಹಬಲೇಶ್ವರ ಕ್ವಾದಗಿ, ಕು: ನವ್ಯಭಟ್ ಮುಂತಾದ ಶ್ರೇಷ್ಟ ಕಲಾವಿದರು ಅಂದಿನ ಯಕ್ಷಗಾನ ಪ್ರಸಂಗದಲ್ಲಿ ಅಭಿನಯಿಸಲಿದ್ದಾರೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ನಮ್ಮ ಶಿವಮೊಗ್ಗ ಟಿವಿ ಮುಖ್ಯಸ್ಥ ವಿ.ಜಗದೀಶ್, ಕಾರ್ಯಕ್ರಮದ ಸಂಯೋಜಕ ಜಿ.ವಿಜಯ್ ಕುಮಾರ್ ಉಪಸ್ಥಿತರಿದ್ದರು.