ಶಿವಮೊಗ್ಗ, ನ.30:
ಸಂಸದ ಬಿ. ವೈ. ರಾಘವೇಂದ್ರ ಅವರನ್ನು ಪ್ರಶಂಸಿಸಲೇಬೇಕು. ಯಾವ ವಿಷಯಕ್ಕೆಂದರೆ ಅವರು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗಾಗಿ ಹೊಸತನಕ್ಕಾಗಿ ಕೇಂದ್ರ ಸರ್ಕಾರದ ಅನುದಾನವನ್ನು ಶಿವಮೊಗ್ಗಕ್ಕೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೈಲ್ವೆ ನಿಲ್ದಾಣ ಶಿವಮೊಗ್ಗಕ್ಕೆ ತಲುಪುವ ಹಾಗೂ ಶಿವಮೊಗ್ಗದಿಂದ ರಾಜಧಾನಿ ಮತ್ತು ಇತರೆ ರಾಜ್ಯಗಳಿಗೆ ವಿಶೇಷವಾಗಿ ತಿರುಪತಿ ಸೇರಿದಂತೆ ದಾರ್ಮಿಕ ಕ್ಷೇತ್ರಗಳಿಗೆ ಸಕಾಲದಲ್ಲಿ ರೈಲು ಸಿಗುವಂತೆ ಮಾಡಿದ ಕೀರ್ತಿ ಹೊಂದಿದ್ದಾರೆ.
ಇದೇ ರೈಲ್ವೆ ನಿಲ್ದಾಣ ದಲ್ಲಿ ಕ್ಯಾಂಟೀನ್ ಬಂದ್ ಆಗಿರುವ ಕಾರಣ ಪ್ಯಾಸೆಂಜರ್ ಹಾಗೂ ಸಾರ್ವಜನಿಕರಿಗೆ ಊಟ ಉಪಹಾರದ ತೊಂದರೆ ಉಂಟಾಗಿದೆ. ಈ ರೈಲ್ವೆ ನಿಲ್ದಾಣದಿಂದ ಅರ್ಜೆಂಟಾಗಿ ಊಟ ಮಾಡಿ ಬರಲು ಹತ್ತಿರದ ಯಾವ ಹೋಟೆಲ್ ಗಳು ಇಲ್ಲ ಆಟೋಗಳಲ್ಲಿ ಹೋಗಲು ಹೋಗಿ ಬರಲು ಭಯವಾಗುತ್ತದೆ ಏಕೆಂದರೆ ಆಟೋಗಳ ದರ ಅವರಿಷ್ಟರಂತಿರುತ್ತದೆ.

ಇಲ್ಲಿ ಹೊಟ್ಟೆ ಹಸಿವಿನಿಂದ ರೈಲ್ವೆ ನಿಲ್ದಾಣದಲ್ಲಿ ಒಂದು ತುತ್ತು ತಿಂದು ಹೋಗುವ ಎಂದು ಸಮಯ ನಿಗದಿ ಮಾಡಿಕೊಂಡು 10 ನಿಮಿಷ ಮುಂಚೆ ಬಂದ ಪ್ರಯಾಣಿಕ ಹೇಗೆ ತಾನೇ ಊಟ ಮಾಡಿ ಹೋಗಲು ಸಾಧ್ಯ ನಿನ್ನೆಯಿಂದ ಇಲ್ಲಿನ ಹೋಟೆಲ್ ಬಂದ್ ಆಗಿದೆ. ಆದರಿಂದ ದಯಮಾಡಿ ರೈಲ್ವೆ
ಅಧಿಕಾರಿಗಳು ಊಟ ಉಪಹಾರ ಕಲ್ಪಿಸಿಕೊಡುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ನೂರಾರು ದೂರು ಉದ್ಬವಿಸಲು ಸಂಸದರು ಇಷ್ಟೊಂದು ಕೆಲಸ ಮಾಡಬೇಕಿತ್ತಾ? ರೈಲ್ವೆ ಇಲಾಖೆ ಅಧಿಕಾರಿಗಳೇ ಎದ್ದೇಳಿ.
ರೈಲ್ವೇ ನಿಲ್ದಾಣದ ಪ್ರತಿಭಟನೆ ಸಂದರ್ಭದಲ್ಲಿ ಪ್ರಯಾಣಿಕರಾದ ಎ.ಎನ್.. ಶ್ರೀನಿವಾಸ್.ವಿ., ಪ್ರಕಾಶ್.ವೈ, ಯೋಗೇಶ್ ಬಿ.ಜೆ.. ಶ್ರೀಕಾಂತ್. ಅವಿನಾಶ್, ವರುಣ್ ಚೇತನ್ ಹಾಗೂ ಇತರರಿದ್ದರು.