ಶಿವಮೊಗ್ಗ,ನ.20: ಇಲ್ಲಿನ ಜೆಹೆಚ್ ಪಟೇಲ್ ಬಡಾವಣೆಯಲ್ಲಿರುವ ತಮಿಳ್ ತಾಯ್ ಸಮುದಾಯ ಭವನ ಆವರಣದಲ್ಲಿ ಇಂದು ಹಬ್ಬದ ವಾತಾವರಣ. ನಾಳೆ ಇಲ್ಲಿ ನೂತನವಾಗಿ ನಿರ್ಮಿಸಿರುವ ಅತಿಥಿ ಗೃಹ ಉದ್ಘಾಟನೆ ಹಾಗೂ ತಮಿಳ್ ತಾಯ್ ಸಂಘದ ಸ್ವರ್ಣ ಮಹೋತ್ಸವ ಸಮಾರಂಭ ಹಬ್ಬದಂತೆ ನಡಯುತ್ತದೆ. ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸುವಂತೆ ತಮಿಳು ಸಮಾಜದ ಮುಖಂಡ ಹಾಗೂ ಸಂಘದ ನಿರ್ಧೇಶಕ ಎಸ್. ಮಂಜುನಾಥ್ (ಬಕೇಟ್) ವಿನಂತಿಸಿದ್ದಾರೆ.
ನ.20ರ ಬೆಳಿಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಜನಪ್ರತಿಧಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ಹಬ್ಬದಂತೆ ನಡೆಯಲಿದೆ ಎಂದರು.
ಸುಮಾರು 2 ಕೋಟಿ ರೂ. ವೆಚ್ಚದಲ್ಲಿ 32 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು , ಈಗಾಗಲೇ 15 ಕೊಠಡಿಗಳು ಪೂರ್ಣಗೊಂಡಿವೆ. ಈ ಕೊಠಡಿಗಳನ್ನು ನಮ್ಮ ಸಮುದಾಯ ಭವನದಲ್ಲಿ ನಡೆಯುವ ವಿವಾಹ, ಹಾಗೂ ಬಡಾವಣೆಯಲ್ಲಿರುವ ಸಮುದಾಯ ಭವನಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಮತ್ತು ಬಡಾವಣೆಯಲ್ಲಿ ಗೃಹಪ್ರವೇಶ ಇನ್ನಿತರ ಸಮಾರಂಭ ನಡೆಸುವವರು ಸಹ ಈ ಕೊಠಡಿಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದರು.
ಸಂಘದ ಅಧ್ಯಕ್ಷರು ಹಾಗೂ ಪದಾದಿಕಾರಿಗಳು ಮತ್ತು ಸಮಾಜದ ಪ್ರಯತ್ನಕ್ಕೆ ಪೂಕರವಾಗಿ ಜನಪ್ರತಿನಿಧಿಗಳ ಸ್ಪಂದನೆಯು ಇಂತಹ ದೊಡ್ಡ ಸಾಧನೆಗೆ ಕಾರಣವಾಗಿದೆ ಎಂದರು.