ಶಿವಮೊಗ್ಗ
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಸಭೆ ಇಂದು ಪ್ರಾಧಿಕಾರದ ಕಚೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸರ್ಕಾರದಿಂದ ಅನುಮತಿ ಪಡೆದು ಸೂಡಾ ವ್ಯಾಪ್ತಿಯ ಕೆಲವು ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು ಹಾಗೂ ನಿವೇಶನಗ ಳನ್ನು ಬಿಡುಗಡೆ ಮಾಡಲಾಯಿತು. ಸೂಡಾದಿಂದ ನಿರ್ಮಿಸಲಾದ ಲೇಔಟ್‌ಗಳ ಅಭಿವೃದ್ಧಿಗೆ ೪ ಕೋಟಿ ರೂಗಳನ್ನು ಬಿಡುಗಡೆ ಮಾಡಲಾಯಿತು.


ಭದ್ರಾವತಿ ಶಿವಮೊಗ್ಗ ೨ ಜಂಕ್ಷನ್ ಅಭಿವೃದ್ಧಿಗೆ ೨ ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಲಾಯಿತು. ಊರಗಡೂರು ಲೇಔಟ್ ಅಭಿವೃದ್ಧಿ ನಡೆಯುತ್ತಿದ್ದು, ಅದರ ವಿತರಣೆ ಬಗ್ಗೆ ಮುಂದಿನ ಮೀಟಿಂಗ್‌ನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸೂಡಾ ಅಧ್ಯಕ್ಷ ನಾಗರಾಜ್ ಹೇಳಿದ್ದಾರೆ.


ವಾಜಪೇಯಿ ಬಡಾವಣೆ ವಿವಾದಕ್ಕೆ ಸಂಬಂಧಿ ಸಿದಂತೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಸಮಸ್ಯೆ ಬಗೆಹರಿಸಲು ತೊಡಕಾಗಿದೆ. ಈ ಬಗ್ಗೆ ಚರ್ಚೆ ನಡೆದಿದ್ದು, ಆದಷ್ಟು ಬೇಗ ಇತ್ಯರ್ಥಗೊಳಿ ಸಲಾಗುವುದು ಎಂದರು. ಚೇಂಜ್ ಆಫ್ ಲ್ಯಾಂಡ್‌ಗೆ ಹಲವು ಅರ್ಜಿಗಳು ಬಂದಿದ್ದು, ಸರ್ಕಾರದ ಅನುಮತಿಗೆ ರವಾನಿಸಲಾಗಿದೆ ಎಂದರು.


ಸಭೆಯ ಅಧ್ಯಕ್ಷತೆಯನ್ನು ಶಾಸಕ ಕೆ.ಎಸ್.ಈಶ್ವರಪ್ಪ ನವರು ವಹಿಸಿದ್ದರು. ಸದಸ್ಯರಾದ ಖದಿರೇಶ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!