ಶಿವಮೊಗ್ಗ: ಕನ್ನಡದ ನೆಲ ಜಲವನ್ನು ಉಳೀಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.
ಅವರು ಇಂದು ನಗರದ ಎಲ್ಎಲ್ಆರ್ ರಸ್ತೆಯಲ್ಲಿ ಸ್ನೇಹಮಯಿ ಯುವಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಮತ್ತು ಅಪ್ಪು ಪುಣ್ಯಸ್ಮರಣೆ ಕಾರ್ಯಕ್ರಮವನ್ನು

ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ನಮಗೆಲ್ಲರಿಗೂ ದೊಡ್ಡ ಹಬ್ಬ. ಇಡೀ ರಾಜ್ಯ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಕನ್ನಡಿಗರು ಮಾತೃಭಾಷೆ ಮರೆಯಬಾರದು. ಕನ್ನಡ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಮೂಲಕ ಮಾತೃ ಭಾಷೆಯ ಋಣ ತೀರಿಸಬೇಕಾಗಿದೆ ಎಂದರು.

ಸ್ನೇಹಮಯಿ ಯುವಕರ ಸಂಘ ಹಲವಾರು ವರ್ಷಗಳಿಂದ ಕನ್ನಡಪರ ಮತ್ತು ಜನಪರ ಕೆಲಸ ಮಾಡುತ್ತಾ ಸಾಧಕರನ್ನು ಸನ್ಮಾನಿಸುತ್ತಾ ಬಂದಿದೆ. ನಾವೆಲ್ಲರೂ ಇವರ ಈ ಸಾಮಾಜಿಕ ಚಟುವಟಿಕೆಗಳಲ್ಲಿ ಕೈ ಜೋಡಿಸೋಣ ಎಂದರು.

ಮುಖ್ಯ ಅತಿಥಿಯಾಗಿ ಮೆಗ್ಗಾನ ಅಧಿಕ್ಷಕ ಡಾ. ಶ್ರೀಧರ್ ಮಾತನಾಡಿ, ಇಂದಿನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೆಗ್ಗಾನ್ನಲ್ಲಿ ೨೪ ಗಂಟೆ ಸೇವೆ ಸಲ್ಲಿಸುವ ೫ ಜನ ಹೆಲ್ಪ್ಲೈನ್ ಸಿಬ್ಬಂದಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂತೋಷ ತಂದಿದೆ ಎಂದರು.

ರೋಟರಿ ವಿಜಯಕುಮಾರ್ ಮಾತನಾಡಿ, ಕನ್ನಡಿಗರಿಗೆ ಸರ್ಕಾರ ಎಲ್ಲಾ ಹುದ್ದೆಗಳಲ್ಲೂ ಮೊದಲ ಆದ್ಯತೆ ನೀಡಬೇಕು. ಕನ್ನಡ ಮೀಡಿಯಂ ವಿದ್ಯಾರ್ಥಿಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಮತ್ತು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕನ್ನಡದಲ್ಲಿಯೇ ವ್ಯಹರಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಹೋಂ ಗಾರ್ಡ್, ಕಮಾಂಡೆಂಟ್ ಜಿ.ಇ. ಶಿವಾನಂದಪ್ಪ ಮತ್ತು ಮೆಗ್ಗಾನ್ ಹೆಲ್ಪ್ಲೈನ್ನ ಗಿರೀಶ್, ಮನು, ಸುಬ್ರಹ್ಮಣ್ಯ, ಪ್ರವೀಣ್, ಬೆನಕೇಶ್, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ನೇಹಮಯಿ ಸಂಘದ ಅಧ್ಯಕ್ಷ ಚಿನ್ನಪ್ಪ, ಶ್ಯಾಮ್ಸುಂದರರ್, ರವಿಶಂಕರ್, ರವಿಕುಮಾರ್, ಬಿ. ಮಹ್ಮದ್ ಉಸ್ಮಾನ್, ಸುರೇಶ್ಬಾಬು ಮೊದಲಾದವರಿದ್ದರು.