ಶಿವಮೊಗ್ಗ, ಅ.೩೧:
ನ್ಯೂ ಮಂಡ್ಲಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.


ಕಾಶಿಪುರದ ಲಕ್ಷ್ಮಿ (೨೩) ಆತ್ಮಹತ್ಯೆ ಮಾಡಿಕೊಂಡವರು. ಪತಿ ನಾಗರಾಜ್‌ನನ್ನು ಬಂಧಿಸಲಾಗಿದೆ.


ನಾಲ್ಕು ವರ್ಷದ ಹಿಂದೆ ಲಕ್ಷ್ಮೀ ಅವರನ್ನು ನಾಗರಾಜ್‌ಗೆ ಮದುವೆ ಮಾಡಿಕೊಡಲಾಗಿತ್ತು. ಇದು ಅಂತರ್ಜಾತಿ ವಿವಾಹ ಆಗಿತ್ತು. ಮದುವೆಯ ವೇಳೆ ೫೦,೦೦೦ ನಗದು, ಒಂದು ತೊಲ ಬಂಗಾರದ ಚೈನ್ ವರದಕ್ಷಿಣೆ ರೂಪದಲ್ಲಿ ಕೊಡಲಾಗಿತ್ತು.

ಒಂದು ವರ್ಷದ ವರೆಗೆ ಚೆನ್ನಾಗಿ ನೋಡಿ ಕೊಂಡಿದ್ದ ನಾಗರಾಜ್ ನಂತರದ ದಿನಗಳಲ್ಲಿ ಮದ್ಯಪಾನ ಮಾಡಿ ಕಿರುಕುಳ ನೀಡುತ್ತಿದ್ದ’ ಎಂದು ಲಕ್ಷ್ಮೀ ಪೋಷಕರು ದೂರು ನೀಡಿದ್ದಾರೆ.


ಅಳಿಯ ನಾಗರಾಜ್, ಲಕ್ಷ್ಮಿ ಮಾವ ಪರಶುರಾಮ, ಅತ್ತೆ ವಿಜಯಲಕ್ಷ್ಮೀ ಮದ್ಯಪಾನ ಮಾಡಿ, ಲಕ್ಷ್ಮಿಯ ಜಾತಿಯನ್ನು ಹೀಯಾಳಿಸು ವುದು ಮತ್ತು ಬೈದು ಮನೆಯಿಂದ ಹೊರಹಾಕುತ್ತಿದ್ದರು. ಹಲವು ಬಾರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಜಿ ಪಂಚಾಯಿತಿಯೂ ಆಗಿತ್ತು. ಮತ್ತೆ ಕಿರುಕುಳ ನೀಡುತ್ತಿದ್ದರಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಅವರು ದೂರಿದ್ದಾರೆ.
ಪ್ರಕರಣ ಸಂಬಂಧ ಲಕ್ಷ್ಮಿ ಅವರ ಪತಿ ನಾಗರಾಜ್, ಮಾವ ಪರಶುರಾಮ್ ಹಾಗೂ ಅತ್ತೆ ವಿಜಯಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಗರಾಜನನ್ನು ಪೊಲೀಸರು ಬಂಧಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!