ಶಿವಮೊಗ್ಗ: ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀಪ್ರಸಾದ್ ಅವರನ್ನು ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭೇಟಿ ನೀಡಿ, ಆತ್ಮೀಯವಾಗಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾವು 18 ತಿಂಗಳು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ನನಗೆ ತೃಪ್ತಿ ಇದೆ. ಸಾರ್ವಜನಿಕರ ಸಹಕಾರ ಸಿಕ್ಕಿದೆ. ಶಿವಮೊಗ್ಗದ ನೆನಪು ತಮ್ಮ ಮನಸ್ಸಿನಲ್ಲಿ ಸದಾ ಇರುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಸರ್ಕಾರಿ ನೌಕರರಿಗೆ ವರ್ಗಾವಣೆ ಎಂಬುದು ಸಹಜ ಎಂದರು. 

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ ಅರುಣ್, ಉಪಾಧ್ಯಕ್ಷ ವೈದ್ಯ, ಖಜಾಂಚಿ ರಂಜಿತ್, ಉಪಾಧ್ಯಕ್ಷ ಹಾಲಸ್ವಾಮಿ, ಶಿಕಾರಿಪುರ ತಾ. ಅಧ್ಯಕ್ಷ ಹುಚ್ರಾಯಪ್ಪ, ಪ್ರಮುಖರಾದ ನಾಗರಾಜ್ ಶೆಣೈ, ಆರುಂಡಿ ಶ್ರೀನಿವಾಸಮೂರ್ತಿ, ಆರ್.ಪಿ. ಭರತ್‍ರಾಜ್‍ಸಿಂಗ್, ಸತ್ಯನಾರಾಯಣ,

ಪುನೀತ್ ಬೆಳ್ಳೂರು, ದಂಡಪಾಣಿ, ಇಸ್ಮಾಯಿಲ್ ಕುಟ್ಟಿ, ವಿಜಯಕುಮಾರ್ ತೇಲ್ಕರ್, ಸೋಮಶೇಖರ್, ರಘುರಾಜ್, ದೇಶಾದ್ರಿ, ಸುರೇಂದ್ರ, ಮತ್ತಿತರಿದ್ದರು. 

By admin

ನಿಮ್ಮದೊಂದು ಉತ್ತರ

error: Content is protected !!