ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.
ಬ್ರಹ್ಮಚಾರಿಣಿಯ ಸ್ವರೂಪ”: ಹೆಸರೇ ಹೇಳುವಂತೆ ತಾಯಿ ಬ್ರಹ್ಮಚಾರಿಣಿ ಎಂದರೆ ದೃಢತೆ ಮತ್ತು ನಡವಳಿಕೆಯ ದೇವತೆ, ತಾಯಿಯು ಒಂದು ಕೈಯಲ್ಲಿ ಜಪಮಾಲೆಯನ್ನು ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. ನೀವು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ನೀವು ತಾಯಿಯ ರೂಪವನ್ನು ಪೂಜಿಸಬೇಕು. ತಾಯಿಯ ಈ ರೂಪವನ್ನು ಪೂಜಿಸುವುದರಿಂದ ಸಂಯಮ,

ಪರಿತ್ಯಾಗ ಮತ್ತು ನಿರ್ಲಿಪ್ತತೆ ಯೊಂದಿಗೆ ವ್ಯಕ್ತಿಯಲ್ಲಿ ಸದ್ಗುಣದ ಭಾವನೆಗಳು ಸಹ ಬೆಳೆಯುತ್ತವೆ ಎನ್ನುವ ನಂಬಿಕೇಯಿದೆ.

ಬ್ರಹ್ಮಚಾರಣಿ ದೇವಿಯ ಹಿನ್ನೆಲೆ”: ಹಲವು ವರ್ಷ ಹೂವು,ಹಣ್ಣುಗಳನ್ನು ಹಾಗೂ ಎಲೆಗಳನ್ನು ಮಾತ್ರ ಒಂದು ಕಾಲದವರೆಗೂ ಸೇವಿಸುತ್ತಿದ್ದಳು, ಕೆಲವು ದಿನಗಳವರೆಗೆ ಕಠಿಣ ಉಪವಾಸವಿದ್ದು, ತೆರೆದ ಆಕಾಶದ ಕೆಳಗೆ ಮಳೆ,ಬಿಸಿಲಿನ ಭಯಾನಕ ಕಷ್ಟಗಳನ್ನು ಸಹಿಸಿದಳು, ನಂತರದಲ್ಲಿ ಎಲೆಯ ಸೇವನೆಯನ್ನು ನಿಲ್ಲಿಸಿದಳು, ಪರ್ಣ ವೆಂದರೆ ಎಲೆ,ಹಾಗಾಗಿ ಈಕೆಯನ್ನು ಅಪರ್ಣ ಎಂದು ಕರೆಯುತ್ತಾರೆ.

ಈ ಕಾರಣ ತಪಸ್ಸಿನ ಬಳಿಕ, ಸುಮಾರು ವರ್ಷಗಳವರೆಗೆ ಕೇವಲ ನೆಲದ ಮೇಲೆ ಉದುರಿ ಬಿದ್ದ ಬಿಲ್ವ ಪತ್ರಗಳನ್ನು ತಿಂದು ಹಗಲು-ರಾತ್ರಿ ಭಗವಾನ್ ಶಂಕರನ ಆರಾಧನೆ ಮಾಡುತ್ತಿದ್ದಳು. ನಂತರ ಶಿವನೇ ಒಬ್ಬ ಸನ್ಯಾಸಿಯ ರೂಪವನ್ನು ತಾಳಿ ಬಂದು, ಶಿವನಲ್ಲಿ ಈಕೆಗೆ ಇರುವ ನಿಷ್ಠೆಯನ್ನು ಪರೀಕ್ಷಿಸಿದನು. ಪಾರ್ವತಿಯ ಅಖಂಡ ನಿಷ್ಠೆಗೆ ಮೆಚ್ಚಿದ ಶಿವನು ಆಕೆಗೆ ಒಲಿಯುತ್ತಾನೆ.

“ಪೂಜಾ ವಿಧಾನ ” : ಈ ದಿನ ಭಕ್ತರು ಬೆಳಗಿನ ಪೂಜೆಯಲ್ಲಿ ಪಾಲ್ಗೊಳ್ಳಲು ಮುಂಜಾನೆ ಬೇಗ ಏಳಬೇಕು. ಪೂಜೆಗೆ ಪಾಲ್ಗೊಳ್ಳುವ ಮುನ್ನ ಶುದ್ಧವಾದ ಅಥವಾ ಸ್ವಚ್ಛವಾದ ಬಟ್ಟೆಯನ್ನು ಧರಿಸಿ ಪೂಜೆಯಲ್ಲಿ ಭಾಗವಹಿಸಬೇಕು. ಬ್ರಹ್ಮಚಾರಣಿ ದೇವಿಯ ವಿಗ್ರಹವನ್ನು ಜೇನುತುಪ್ಪ ಮತ್ತು ಹಾಲಿನಿಂದ ಅಭಿಷೇಕ ಮಾಡಿ ಮತ್ತು ಅಂತಿಮವಾಗಿ ವಿಗ್ರಹದ ಹಣೆಗೆ ಸಿಂಧೂರವನ್ನು ಇಡಿ, ಪೂಜೆಯ ಸಮಯದಲ್ಲಿ ಭಕ್ತರು ಬ್ರಹ್ಮಚಾರಿಣಿ ದೇವಿಗೆ ಹೂವು,ಶ್ರೀಗಂಧ, ಹಾಲು,ಅನ್ನ,ಮೊಸರು ಮತ್ತು ಜೇನುತುಪ್ಪವನ್ನು ಅರ್ಪಿಸುವುದು ಉತ್ತಮ.ಪೂಜೆಯ ಸಮಯದಲ್ಲಿ ದೇವಿಯನ್ನು ದಾಸವಾಳ ಮತ್ತು ಬಿಳಿ ಕಮಲದ ಹೂವುಗಳಿಂದ ಪೂಜಿಸಲಾಗುತ್ತದೆ.

ಸೃಷ್ಟಿಕರ್ತನಾದ ಬ್ರಹ್ಮನಿಗೆ ಜ್ಞಾನ ಕೊಟ್ಟವಳು, ಬ್ರಹ್ಮಚಾರಣಿಯದ್ದು ಸಾತ್ವಿಕ ಸುಂದರ ರೂಪ, ಬ್ರಹ್ಮಚಾರಿಣಿ ಯ ರೂಪ ಅತ್ಯಂತ ವಿಶಿಷ್ಟವಾದದ್ದು. ಶಿವನನ್ನು ಪಡೆಯುವುದಕ್ಕೆ ಬ್ರಹ್ಮಚಾರಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡುತ್ತಾಳೆ. ತಪಸ್ಸನ್ನು ಮಾಡಿದ ಸಲುವಾಗಿ ಸದಾ ಧ್ಯಾನದಲ್ಲಿ ತಲ್ಲೀನರಾಗಿರುತ್ತಾಳೆ. ನವರಾತ್ರಿ ಎರಡನೇ ದಿನ ಈ ತಾಯಿಯನ್ನು ಪೂಜಿಸಿದರೆ ವಿಶೇಷ ವರಗಳು ಸಿಗುತ್ತವೆ. ಸದಾ ಧ್ಯಾನ ಮಗ್ನಳಾದ ಬ್ರಹ್ಮಚಾರಿಣಿಗೆ ಭಕ್ತರ ಮೇಲೆ ಅಪಾರ ಕಾಳಜಿ ನಿತ್ಯ ಕಲ್ಮಶವಿಲ್ಲದ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸಿದರೆ ಬೇಡಿದ ವರಗಳನ್ನು ಕರುಣಿ ಸುತ್ತಾಳೆ. ಬ್ರಹ್ಮಚಾರಿಣಿಯ ಆರಾಧನೆಯಿಂದ ಪೂಜೆಯ ಪಲಗಳು ಅನಂತ ವಾದವೂ ಬ್ರಹ್ಮಚಾರಣಿ ತನ್ನನ್ನು ಪೂಜಿಸುವ ಭಕ್ತರಿಗೆ ಅನಂತ ಫಲಗಳನ್ನು ನೀಡುತ್ತಾಳೆ.
ಇವಳ ಉಪಾಸನೆಯಿಂದ ಅಧ್ಯಾತ್ಮ ಸಾಧನೆ ಮಾಡಬಹುದು.ದೇವಿಯ ಆರಾಧನೆಯಿಂದ ತ್ಯಾಗ ಮನೋಭಾವ, ವೈರಾಗ್ಯ, ಸದಾಚಾರ ಮತ್ತು ಸಂಯಮ ವೃದ್ಧಿಯಾಗುತ್ತದೆ. ಮನಸ್ಸು ಏಕಾಗ್ರತೆಯನ್ನು ಸಾಧಿಸುತ್ತದೆ. ಮನಸ್ಸು ಏಕಾಗ್ರತೆಯಲ್ಲಿ ಇರುತ್ತದೆ. ಇವರ ಅನುಗ್ರಹವಿದ್ದರೆ ಸಕಲ ಕಾರ್ಯದಲ್ಲಿ ಜಯ ಸಾಧಿಸಬಹುದು.
ಬ್ರಹ್ಮಚಾರಿಣಿ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ,ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿಯಾಗುತ್ತದೆ. ಬ್ರಹ್ಮಚಾರಿಣಿ ದೇವಿಯ ಕೃಪೆ ಇದ್ದರೆ ಆತನಿಗೆ ಎಲ್ಲೆಡೆ ಸಿದ್ಧಿ ಮತ್ತು ವಿಜಯದ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯಿದೆ.