ಶಿವಮೊಗ್ಗ,
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿರುವ ಶಿವಮೊಗ್ಗ ದಸರಾ ಭಾಗವಾಗಿ, ಪುನೀತ್ ರಾಜ್ಕುಮಾರ್ರವರ ಸಂಸ್ಮರಣೆಯಲ್ಲಿ ಸೆ. ೨೭ ರಿಂದ ಅ. ೦೧ರವರೆಗೆ ನಗರದ ವಿವಿಧ ಚಿತ್ರಮಂದಿರಗಳಲ್ಲಿ ದಸರಾ ಚಲನಚಿತ್ರೋತ್ಸವವನ್ನುಆಯೋಜಿಸಲಾಗಿದೆ.
ಸೆ.೨೭ರಂದು ಬೆಳಗ್ಗೆ ೧೦ ಗಂಟೆಗೆ ರಾಜಕುಮಾರ
೨೮ರಂದು ಬೆಳಿಗ್ಗೆ ೮.೩೦ಕ್ಕೆ ಹೆಚ್ಪಿಸಿ ಚಿತ್ರಮಂದಿರದಲ್ಲಿ ಮಾಣಿಕ್ಯ
೨೯ರಂದು ಬೆಳಿಗ್ಗೆ ೮.೩೦ಕ್ಕೆ ಮಂಜುನಾಥ ಚಿತ್ರಮಂದಿರದಲ್ಲಿ ಓಂ
೩೦ರಂದು ಬೆಳಿಗ್ಗೆ ೮.೩೦ಕ್ಕೆ ವೀರಭದ್ರೇಶ್ವರದಲ್ಲಿ ಚಾರ್ಲಿ ೭೭೭,
ಅ.೧ರಂದು ಬೆಳಿಗ್ಗೆ ೮.೩೦ಕ್ಕೆ ಬಡವರಾಸ್ಕಲ್ ಪ್ರದರ್ಶನಗೊಳ್ಳಲಿದೆ.

ದಸರಾ ಚಲನಚಿತ್ರೋತ್ಸವವನ್ನು ಸೆ.೨೭ ರ ಬೆಳಿಗ್ಗೆ ೯ ಗಂಟೆಗೆ ಲಕ್ಷ್ಮಿಚಿತ್ರಮಂದಿರದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್. ಲಿಂಗದೇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಚಲನಚಿತ್ರಕಲಾವಿದರಾದ ಅಜಯ್ರಾವ್, ಮೇಘಶ್ರೀ, ಕಿರುತೆರೆ ಕಲಾವಿದೆ ಅಂಕಿತ ಅಮರ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಹಾಪೌರರಾದ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರಗನ್ನಿ, ಆಯಕ್ತರಾದ ಮಾಯಣ್ಣಗೌಡ, ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ ಬೆಳ್ಳಿಮಂಡಲದ ಕಾರ್ಯಾಧ್ಯಕ್ಷ

ಡಿ. ಎಸ್. ಅರುಣ್, ಜಿಲ್ಲಾಧಿಕಾರಿಗಳು, ಶಿವಮೊಗ್ಗ ಬೆಳ್ಳಿಮಂಡಲ ಗೌರವಾಧ್ಯಕ್ಷ ಡಾ.ಆರ್. ಸೆಲ್ವಮಣಿ, ಹಿರಿಯಾ ವಾರ್ತಾಧಿಕಾರಿ ಶಫಿ ಸಾದುದ್ಧೀನ್, ಶಿವಮೊಗ್ಗ ಬೆಳ್ಳಿಮಂಡಲದ ಸಂಚಾಲಕ ವೈದ್ಯ, ಲಕ್ಷೀಚಿತ್ರ ಮಂದಿರದ

ಮಾಲೀಕರಾದಕೃಷ್ಣಮೂರ್ತಿ, ಆಡಳಿತ ಪಕ್ಷದ ನಾಯಕ ಎಸ್.ಎನ್. ಚೆನ್ನಬಸಪ್ಪ, ವಿಪಕ್ಷ ನಾಯಕಿ ರೇಖಾರಂಗನಾಥ್, ಮಂಜುಳಾ ಶಿವಣ್ಣ, ಸದಸ್ಯರಾದರಮೇಶ್ ಹೆಗ್ಡೆ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.