ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಸಂವೃದ್ಧಿ ಟ್ರಸ್ಟ್ (ರಿ.) ಹಾಗೂ ಶ್ರೀ ಶಂಕರ ಕಣ್ಣಿನ ಆಸ್ಪತ್ರೆಯ ವತಿಯಿಂದ ಶಿವಮೊಗ್ಗ ನಗರದ ಹೊಸಮನೆ ಬಡವಾಣಿಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು..

.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೆರೇಪಿತ ಸಂಸ್ಥೆಯಾದ ಕೇಶವ ಚಿಕಿತ್ಸಾಲಯದಲ್ಲಿ
ಈ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಂಕರ್ ಕಣ್ಣಿನ ಆಸ್ಪತ್ರೆಗೆ ವೈದ್ಯರಾದ ಡಾ. ವಿಶ್ವಾಸ್ ರವರ ನೇತೃತ್ವದಲ್ಲಿ ತಪಾಸಣಾ ಶಿಬಿರ ಪ್ರಾರಂಭವಾಯಿತು….

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂವೃದ್ಧಿ ಟ್ರಸ್ಟ್ ನ ತೇಜಸ್ವಿನಿ ಸಿ. ಎಸ್ ವಹಿಸಿದ್ದರು, ಟ್ರಸ್ಟ್ ನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ರೇಖಾ ರಂಗನಾಥ್, ಸೇರಿದಂತೆ ಇತರ ಪ್ರಮುಖರು , ಸಂವೃದ್ಧಿ ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು…
ಒಟ್ಟು 175 ಜನರು ಕಣ್ಣಿನ ತಪಾಸಣೆ ಮಾಡಿಸಿ ಕೊಂಡರು

By admin

ನಿಮ್ಮದೊಂದು ಉತ್ತರ

error: Content is protected !!