ಶಿವಮೊಗ್ಗ,
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು ಈ ಕೂಡಲೇ ಮಾಡಿಸಬೇಕು.


ಈ ಯೋಜನೆಯಡಿ ಈಗಾಗಲೇ ಅರ್ಹ ರೈತ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನ ನೀಡಲಾಗುತ್ತಿದ್ದು, ಮುಂದಿನ ಆರ್ಥಿಕ ನೆರವು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಇ-ಕೆವೈಸಿ ಮಾಡದಿದ್ದಲ್ಲಿ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಫಲಾನುಭವಿಗಳು ಇ-ಕೆವೈಸಿಯನ್ನು

ತಮ್ಮ ತಾಲ್ಲೂಕಿನ ಹತ್ತಿರದ ಸಿಎಸ್‌ಸಿ (ನಾಗರಿಕ ಸೇವಾ ಕೇಂದ್ರ) ಅಥವಾ ಗ್ರಾಮ ಒನ್ ಕೇಂದ್ರ ಅಥವಾ hಣಣಠಿ://ಠಿmಞisಚಿಟಿ.gov.iಟಿ ಪೋರ್ಟಲ್‌ನ ಫಾರ್ಮರ್ಸ್ ಕಾರ್ನರ‍್ನ ಇ-ಕೆವೈಸಿ ಅವಕಾಶದಡಿ ಇ-ಕೆವೈಸಿಯನ್ನು

ದಿನಾಂಕ: ೨೨-೦೯-೨೦೨೨ ರೊಳಗೆ ಮಾಡಿಕೊಳ್ಳಬೇಕು. ಇ-ಕೆವೈಸಿಯನ್ನು ಮಾಡಿಸಲು ಇನ್ನು ಕೊನೆಯ ಮೂರು ದಿನಗಳು ಮಾತ್ರ ಉಳಿದಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್.ಹೆಚ್.ಎಸ್. ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!