ಸಾಗರ,ಸೆ.07:
ಸಾಗರ ವಿಧಾನಸಭಾ ಸದಸ್ಯ ಹಾಗೂ ಎಂಐಎಸ್ ಎಲ್ ಅಧ್ಯಕ್ಷರು ಮತ್ತು ಮಾಜಿ ಸಚಿವರೂ ಆದ ಹರತಾಳು ಹಾಲಪ್ಪ ಅವರು ಇಂದು ಸಂಜೆಯ ಹೊತ್ತಿಗೆ ದಿಡೀರ್ ಬೆಂಗಳೂರಿಗೆ ಹೋಗಿದ್ದಾರೆ.
ಅವರು ಇಂದು ಮದ್ಯಾಹ್ನ ಅನಾರೋಗ್ಯದ ನಿಮಿತ್ತ ಬರುವ ಮೂರುದಿನದ ಕಾರ್ಯಕ್ರಮ ರದ್ದುಗೊಳಿಸಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೋಗಿದ್ದಾರೆಂದು ಮೂಲಗಳು ತಿಳಿಸಿವೆ.
ಹಾಲಪ್ಪ ಅವರಿಗೆ ಇತ್ತೀಚೆಗಷ್ಟೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು, ಬೆಂಗಳೂರಿನ ಇದೇ ಆಸ್ಪತ್ರೆಯಲ್ಲಿ ಗುಣಮುಖರಾಗಿ ಸಾಗರಕ್ಕೆ ಬಂದಿದ್ದರು. ಇಂದು ಅವರು ಬಾರಂಗಿ ಪ್ರದೇಶದ ಭೂ ಕುಸಿತ ಪ್ರದೇಶಕ್ಕೆ ಬೇಟಿ ನೀಡಬೇಕಿತ್ತು. ಆದರೆ ಆರೋಗ್ಯ ದಲ್ಲಿ ಏರುಪೇರು ಕಂಡುಬಂದ ಹಿನ್ಮೆಲೆಯಲ್ಲಿ ಸಂಜೆಯ ಹೊತ್ತಿಗೆ ಬೆಂಗಳೂರು ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ