ತುಂಗಾತರಂಗ ವರದಿ
ಶಿವಮೊಗ್ಗ,ಸೆ.06:
ನಗರದ ಪ್ರಿಯದರ್ಶನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕಾವ್ಯ R ಜೂನ್ ನಲ್ಲಿ ನಡೆದ ಎಸ್ ಎಸ್ ಎಲ್ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆಯುವ ಮೂಲಕ ರಾಜ್ಯದಲ್ಲೇ ಎರಡನೇ ಹಾಗೂ ಜಿಲ್ಲೆಯ ಪ್ರಥಮ ಸ್ಥಾನದ ಮೂಲಕ ಉನ್ನತ ಪಟ್ಟಕ್ಕೇರಿದ್ದಾರೆ.
ಹಿಂದೆ ಫಲಿತಾಂಶ ಬಂದಿದ್ದಾಗ 620/625 ಅಂಕಗಳನ್ನು ಪಡೆದಿದ್ದ ಕಾವ್ಯ ರಾಜ್ಯಕ್ಕೆ 6ನೇ ಸ್ಥಾನವನ್ನು ಪಡೆದುಕೊಂಡಿದ್ದರು.
ಕಾವ್ಯ ಅವರ ಹಿಂದಿ ಮತ್ತು ವಿಜ್ಞಾನ ವಿಷಯದಲ್ಲಿ ಯಾವುದೇ ತಪ್ಪುಗಳು ಇರಲಿಲ್ಲ ಮೌಲ್ಯಮಾಪಕರ ಕಣ್ತಪ್ಪಿನಿಂದ
ಪ್ರತಿ ವಿಷಯದಲ್ಲಿ ಎರಡು ಮಾರ್ಕ್ಸ್ ಗಳು ಕಡಿತ ಗೊಂಡಿದ್ದವು. ಹಾಗಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲಾಗಿತ್ತು.
ಹಿಂದಿ ಮತ್ತು ವಿಜ್ಞಾನದಲ್ಲಿ ಎರಡೂ ಕಡೆ 80ಕ್ಕೆ 80 ಅಂಕಗಳನ್ನು ಪಡೆದು ಯಶಸ್ವಿಯಾಗಿದ್ದಾಳೆ. ಈಗ ಕಾವ್ಯ ಅವರು ಪಡೆದ ಅಂಕ 624/625 ಆಗಿದೆ.
ಅಭಿನಂದನೆ
ರಾಜ್ಯಕ್ಕೆ ಎರಡನೇ ಸ್ಥಾನ. ಮತ್ತು ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುವ ಕಾವ್ಯ ಸಾಧನೆಗೆ ಕಾರ್ಯದರ್ಶಿ ಎನ್. ರಮೇಶ್ , ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.
ಕೋವಿಡ್ 19ನ ಈ ಲಾಕ್ಡೌನ್ ವೇಳೆಯಲ್ಲಿಯೂ ತಡವಾಗಿ ನಡೆದ ಪರೀಕ್ಷೆಯಲ್ಲಿ ನಿರಂತರ ಪರಿಶ್ರಮದಿಂದ ಉತ್ತಮ ಅಂಕ ಪಡೆದು ಶಾಲೆಗೆ ಹಾಗೂ ಪೋಷಕರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿರುವುದು ಶ್ಲಾಘನೀಯ.