ಶಿವಮೊಗ್ಗ : ನಗರದ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಬ೦ದಿದ್ದು, ಅಧ್ಯಕ್ಷರಾಗಿ ಎಸ್.ಎಸ್.ಜ್ಯೋತಿ ಪ್ರಕಾಶ್, ಕಾರ್ಯದರ್ಶಿಯಾಗಿ ಎಸ್.ಪಿ. ದಿನೇಶ್, ಉಪಾಧ್ಯಕ್ಷರಾಗಿ ಹೆಚ್ ಶಾಂತಾ ಆನಂದ್, ಕೋಶಾಧ್ಯಕ್ಷರಾಗಿ ಕೆ.ಎಸ್ ತಾರಾನಾಥ್, ದಿನೇಶ್, ಸಹ ಕಾರ್ಯದರ್ಶಿಯಾಗಿ ಶ್ರೀ ಬಳ್ಳೆಕೆರೆ ಸಂತೋಷ್ ಆಯ್ಕೆಯಾಗಿದ್ದಾರೆ.
ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿಪ್ರಕಾಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿ ಸ್ಥಾನಕ್ಕೆ ಟಿ.ಬಿ.ಜಗದೀಶ್ ಹಾಗೂ ಎಸ್.ಪಿ.ದಿನೇಶ್ ನಾಮಪತ್ರ ಸಲ್ಲಿಸಿದ್ದರು. ಆಡಳಿತ ಮಂಡಳಿ ಸದಸ್ಯರ ಸ್ಥಾನಕ್ಕೆ ಆಗಸ್ಟ್ 21 ರಂದು ಚುನಾವಣೆಯಲ್ಲಿ ಎಸ್.ಎಸ್.ಜ್ಯೋತಿಪ್ರಕಾಶ್ ಮತ್ತು ನಡೆದ ಎನ್.ಜಿ.ರಾಜಶೇಖರ್ ನೇತೃತ್ವದ ತಂಡವು 8 ಹಾಗೂ ಎಸ್.ಪಿ. ದಿನೇಶ್ ನೇತೃತ್ವದ ಬಸವಸೇನೆ ತಂಡ 7 ಸ್ಥಾನಗಳಲ್ಲಿ ಗೆದ್ದಿದ್ದರು.
