ಶಿವಮೊಗ್ಗ,ಆ.24:
ಇಲ್ಲಿನ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಸ್ಥಾನದ ಮೀಸಲಾತಿ ಪಟ್ಟಿಯನ್ನು ಇಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಕೊನೆಯ ಹಾಗೂ ನಾಲ್ಕನೇ ಹಂತದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಪಟ್ಟಿ ಇದಾಗಿದ್ದು ಶಿವಮೊಗ್ಗ ಮೇಯರ್ ಸ್ಥಾನವು ಬಿಸಿ ಎ ಗೆ ನಿಗಧಿಯಾಗಿದೆ. ಉಪಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಪ್ರಸಕ್ತ ಅವಧಿಯು ಅತ್ಯಂತ ಕಡಿಮೆ ಇದ್ದರೂ ಸಹ ಮೇಯರ್ ಹಾಗೂ ಉಪಮೇಯರ್ ಆಗಲು ನಾನಾ ಸದಸ್ಯರು ಸದ್ದುಮಾಡದೇ ತಮ್ಮ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬಹುತೇಕ ಸ್ಥಾಯಿ ಸಮಿತಿಯಲ್ಲಿದ್ದವರು ಈ ಜೂಜಾಟದಲ್ಲಿ ಬಾರೀ ಪ್ರಯತ್ನ ಪಡುತ್ತಿದ್ದಾರೆನ್ನಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!