ಶಿವಮೊಗ್ಗ,ಸೆ.01:
ರಾಜ್ಯದ ಗ್ರಾಮೀಣಾಭಿವೃದ್ದಿ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರಿಗೆ ಕರೋನ ಪಾಸಿಟಿವ್ ಬಂದಿದೆ. ಈ ಸಂಬಂಧ ಟ್ವಿಟರ್ನಲ್ಲಿ ಈಶ್ವರಪ್ಪ ತಿಳಿಸಿದ್ದಾರೆ.
ಈಶ್ವರಪ್ಪರ ಮಾತು
ನನಗೆ ಇಂದು ಕರೊನಾ ಸೋಂಕು ದೃಡ ಪಟ್ಟಿದ್ದು, ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ . ಸದ್ಯಕ್ಕೆ ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಹಾರೈಕೆಯಿಂದ ಶೀಘ್ರ ಗುಣಮುಖನಾಗುವ ವಿಶ್ವಾಸ ನನಗಿದೆ ಎಂದು ಸಚಿವ ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.
ನಾಳೆ ಪೂಜೆ
ಕೆ.ಎಸ್.ಈಶ್ವರಪ್ಪನವರು ಶೀಘ್ರ ಗುಣಮುಖರಾಗಲೆಂದು ಹಾರೈಸಿ ನಾಳೆ ಬೆಳಗ್ಗೆ ಹರಕೆರೆಯ ಶ್ರೀ ರಾಮೇಶ್ವರ ದೇವಸ್ಥಾನ ದಲ್ಲಿ ರುದ್ರಾಭಿಷೇಕ ಆಯೋಜಿಸಿದೆ. ಆತ್ಮೀಯರೆಲ್ಲರೂ ಆಗಮಿಸಲು ಈಶ್ವರಪ್ಪ ಯಂಗ್ ಬ್ರಿಗೇಡ್ ಪರವಾಗಿ ಅಧ್ಯಕ್ಷ ಮಂಜುನಾಥ್ ಕೋರಿದ್ದಾರೆ.