ಶಿವಮೊಗ್ಗ,
ನಾಳೆ ಸಂಜೆವರೆಗೆ 144 ಸೆಕ್ಷನ್ ಮುಂದುವರೆಯಲಿದೆ ಎಂದು ಪೂರ್ವ ವಲಯದ ಐಜಿಪಿ ಕೆ.ತ್ಯಾಗರಾಜನ್ ಹೇಳಿದ್ದಾರೆ.


ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಹೆಚ್ಚುವರಿಯಾಗಿ ಬಂದ ಎಲ್ಲಾ ಪೊಲೀಸ್ ತುಕಡಿಗಳು ಕಾರ್ಯನಿರ್ವಹಿಸುತ್ತಿವೆ. ಪೊಲೀಸ್ ಬಂದೋಬಸ್ತು ಬಿಗಿಗೊಳಿಸಿದ್ದೇವೆ. ಯಾವುದೇ ಪಡೆಗಳನ್ನು ವಾಪಸ್ ಕಳಿಸಿಲ್ಲ. ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ೪ಜನರನ್ನು ಬಂಧಿಸಲಾ ಗಿದೆ. ಗಲಭೆಗೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ ಎಂದರು.


ಹೊರ ಜಿಲ್ಲೆಗಳಿಂದ ಬಂದ ಪೊಲೀಸ್ ಸಿಬ್ಬಂದಿಗ ಳನ್ನು ನಾಳೆ ಒಂದು ದಿನ ನೋಡಿ ವಾಪಸ್ಸು ಕಳಿಸುವ ಬಗ್ಗೆ ತೀರ್ಮಾನಿಸಲಾಗವುದು. ನಗರ ಸಂಪೂರ್ಣ ಸಹಜ ಸ್ಥಿತಿಗೆ ಬಂದ ನಂತರ ಸೆಕ್ಷನ್ ಮುಂದುವರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.


ಬೆಳಿಗ್ಗೆ ಮತ್ತು ಸಂಜೆ ೨ ಹೊತ್ತು ವಿವಿಧ ಪಡೆಗಳು ಪಥಸಂಚಲನ ಮಾಡಲಿದ್ದಾರೆ. ಸಂಜೆ ೭ಗಂಟೆಯೊಳಗೆ ಇಂದು ಮತ್ತು ನಾಳೆ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚುವಂತೆ ಅವರು ವಿನಂತಿಸಿದ್ದು, ರಾತ್ರಿ ಬಿಗಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ ಮತ್ತು ರಾತ್ರಿ ಕಫ್ರ್ಯೂ ಇಂದು ಮತ್ತು ನಾಳೆ ಮುಂದುವರೆಯಲಿದೆ.
ಈ ಸಂದರ್ಭದಲ್ಲಿ ಎಸ್ಪಿ ಲಕ್ಷ್ಮೀಪ್ರಸಾದ್, ಡಾ.ಶೇಖರ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!