ಸೊರಬ,
ಬಿರುಸಿನ ಗಾಳಿ ಮಳೆಗೆ ಅಂಗನವಾಡಿ ಕೇಂದ್ರದ ಮೇಲೆ ಮರವೊಂದು ಉರುಳಿರುವ ಘಟನೆ ತಾಲೂಕಿನ ಬಾಡದಬೈಲು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಅಂಗನವಾಡಿ ಕೇಂದ್ರ ತೆರದಿದ್ದ ವೇಳೆಯಲ್ಲಿಯೇ ಮರ ಉರುಳಿದೆ.
ಕೇಂದ್ರದಲ್ಲಿ 9 ಮಕ್ಕಳಿದ್ದರು. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಆದರೆ, ಕೇಂದ್ರದ ಅಡುಗೆ ಕೋಣೆಯ 3 ಪಕಾಸಿ, ಹಂಚುಗಳಿಗೆ ಹಾನಿಯಾಗಿದೆ.
ಸ್ಥಳಕ್ಕೆ ಚಂದ್ರಗುತ್ತಿ ಗ್ರಾಪಂ ಅಧ್ಯಕ್ಷ ಎಂ.ಪಿ. ರತ್ನಾಕರ, ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಪ್ಪ, ಸದಸ್ಯರಾದ ರೇಣುಕಾ ಪ್ರಸಾದ್, ತಿರುಪತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.