ಶಿವಮೊಗ್ಗ,
ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೊಬೊಟಿಕ್ಸ್ ಮತ್ತು ಆರ್ಟಿಫೀಷಿಯಲ್ ಇಂಟಲಿಜೆನ್ಸ್ ನೂತನ ಕೋರ್ಸ್ ಆರಂಭವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಕೆ.ನಾಗೇಂದ್ರ ಪ್ರಸಾದ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,

ರೊಬೊಟಿಕ್ಸ್ ಮತ್ತು ಆರ್ಟಿಫೀಷಿಯಲ್ ಇಂಟಲಿಜೆನ್ಸ್ ವಿಭಾಗವನ್ನು ನಮ್ಮ ಕಾಲೇಜಿನಲ್ಲಿ ಪ್ರಾರಂಭಿಸಲಾಗಿದ್ದು, ಮಲೆನಾಡಿನ ಭಾಗದಲ್ಲಿಯೇ ವಿಶೇಷವಾದ ಕೋರ್ಸ್ ಇದಾಗಿದೆ ಎಂದು ತಿಳಿಸಿದರು.

ಆಟೋಮೇಷನ್ ಕ್ಷೇತ್ರದಲ್ಲಿ ರೊಬೊಟಿಕ್ಸ್ ಮತ್ತು ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಪ್ರಮುಖ ಪಾತ್ರ ಪಡೆದುಕೊಂಡಿದೆ . ಉತ್ಪಾದನಾ ಕ್ಷೇತ್ರದಲ್ಲಿ ರೊಬೊಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ಅನೇಕ ಉತ್ಪಾದನಾ ಸವಾಲುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಬಹುತೇಕ ಕಂಪನಿಗಳು ಹಾಗೂ ಕಾರ್ಖಾನೆಗಳು ರೊಬೊಟಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿದ್ದು , ಅಧಿಕ ನಾವಿನ್ಯಯುತ ಉದ್ಯೋಗವಕಾಶಗಳು ಲಭ್ಯವಿದೆ, ಈ ಹಿನ್ನಲೆಯಲ್ಲಿಯೇ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜು ನೂತನ ವಿಭಾಗ ಪ್ರಾರಂಭಿಸಿದೆ ಎಂದರು.

ಈಗಾಗಲೇ ಕಾಲೇಜಿನಲ್ಲಿ ರೊಬೋಟ್ , ತ್ರಿಡಿ ಪ್ರಿಂಟರ್ ರೊಬೊಟ್ ಸಿ.ಎನ್.ಸಿ ಇಂಟರ್ಫೇಸ್ ಸೌಲಭ್ಯಗಳು ಲಭ್ಯವಿದ್ದು ಪರಿಣಾಮಕಾರಿ ಕಲಿಕೆಗೆ ಉನ್ನತ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಇಂಜಿನಿಯರಿಂಗ್ ಕುಲಸಚಿವರಾದ ಪ್ರೊ.ಟಿ.ಎಸ್.

ಹೂವಯ್ಯಗೌಡ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ.ಈ ಬಸವರಾಜ್ , ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು.