ಶಿವಮೊಗ್ಗ, ಜು.16:
ನಿನ್ನೆ ಸಂಜೆ ಮುಗಿದು ರಾತ್ರಿ ಬರುವ ಹೊತ್ತದು. ಕತ್ತಲಾಗುತ್ತಾ ಬಂದಿತ್ತು. ಬೀದಿ ದೀಪಗಳು ಹತ್ತಿದ್ದವು. ಈ ಹೊತ್ತಿನಲ್ಲಿ ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಅನಾಹುತಕಾರಿಯಾದ ( ಜೋಕ್ಸ್ ಎನಿಸುವ) ಘಟನೆಯೊಂದು ನಡೆಯಿತು.
ಏನದು ಅಂತೀರಾ? ಎಣ್ಣೆ ಮತ್ತಿನಲ್ಲಿ ಆಟೋ ಓಡಿಸುತ್ತಾ, ಇಡೀ ರಸ್ತೆಯಲ್ಲಿ ಅಕ್ಕ ಪಕ್ಕಗಳು ತಲುಪುತ್ತಿದ್ದು ಅದೃಷ್ಟಾವಶಾತ್ ಬೇರೆ ಯಾರಿಗೂ ತೊಂದರೆಯಾಗಿಲ್ಲ. ಇದನ್ನೊಂದು ಜೋಕ್ ನೋಡುವಂತೆ ಜನ ನೋಡಿದ್ದೊಂದು ವಿಸ್ಮಯ, ವಿಶೇಷ.

ವಿವರ ಹೀಗಿದೆ ಕೇಳಿ

ಬೈಪಾಸ್ ನಲ್ಲಿ ಕುಡಿದ ಮತ್ತಿನಲ್ಲಿ ಆಟೋ ಓಡಿಸಿ ಆಟೋ ಪಲ್ಟಿಯಾಗಿ ಆಟೋ ಗಾಜು ಒಡೆದು, ಹಿಂಬದಿ ಕಿತ್ತು ಹೋಗಿದ್ದರೂ ಸಹ ಸುರಿವ ಮಳೆ ನಡುವರ ಮತ್ತೆ ಅದೇ ಕುಡಿತದ ನಶೆಯಲ್ಲೇ ಆಟೋ ಚಲಾಯಿಸಿ ಹೋಗಿದ್ದು ಅತ್ಯಂತ ರೋಚವಾಗಿತ್ತೆಂದು ಜನ ಹೇಳುತ್ತಾರೆ.


ಅದೃಷ್ಟವಶಾತ್ ಆಟೋ ಒಳಗೆ ಪ್ರಯಾಣಿಕರು ಇರಲಿಲ್ಲ. ಪಕ್ಕದಲ್ಲಿ ಯಾರೂ ಸಿಕ್ಕಿಲ್ಲ.
ಕಿಯಾ ಶೋರೂಮ್ ಬಳಿ ನಡೆದ ಈ ಘಟನೆ ಎಣ್ಣೆ ಮತ್ತು ತರದ ಆಪತ್ತು ಎಂಬ ಕಥೆಯಂತಿತ್ತು…!?

ಚಿತ್ರ ವೀಡಿಯೋ : ನಾಗರಾಜ್ ಶಣೈ, ಪತ್ರಕರ್ತರು, ಶಿವಮೊಗ್ಗ

By admin

ನಿಮ್ಮದೊಂದು ಉತ್ತರ

You missed

error: Content is protected !!