ಶಿವಮೊಗ್ಗ, ಆ.25:
ತೀರ್ಥಹಳ್ಳಿ ಪೊಲೀಸ್ ಕಾನ್ಸ್ ಸ್ಟೇಬಲ್ ಪೂರ್ಣೇಶ್ ರನ್ನ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತ ರಾಜ್ ಅವರು ಕೆಲಸಕ್ಕೆ ಗೈರು ಹಾಗೂ ಅಸಭ್ಯ ವರ್ತನೆ ಕಾರಣದಿಂದ ಅಮಾನತ್ತುಗೊಳಿಸಿದ್ದಾರೆ.
ಕಳೆದ ಗಣಪತಿ ಹಬ್ಬದಂದು ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಕಂಠಪೂರ್ತಿ ಕುಡಿದು ವ್ಯಕ್ತಿಯೋರ್ವನನ್ನ ತುಳಿಯುತ್ತಿದ್ದ ವಿಡಿಯೋವೊಂದು ವೈರಲ್ ಆಗಿದ್ದು, ಇದು ಸಾರ್ವಜನಿಕವಾಗಿ ಪೊಲೀಸ್ ವರ್ತನೆಯಿದು ಎಂಬಂತೆ ಬಿಂಬಿತವಾಗುವಂತಾಗಿತ್ತು.
ಈ ಸಂಬಂಧ ಆ ಪೊಲೀಸಪ್ಪನ ವೀಡಿಯೋ ಕ್ಲಿಪ್ ನ ಪೋಟೋಗಳೊಂದಿಗೆ ನಿನ್ನೆ ಸಂಜೆ ತುಂಗಾತರಂಗ ಎಳೆಎಳೆಯಾದ ಮಾಹಿತಿ ನೀಡಿತ್ತು. ಕ್ರಮಕೈಗೊಳ್ಳಲು ಸಕಲ ವಿಚಾರಣೆ ನಡೆಸಿ ವರದಿ ಸಿದ್ದಪಡಿಸಿಕೊಡಿದ್ದ ಇಲಾಖೆ ಆ ಕ್ಷಣದಲ್ಲೇ ಅವರನ್ನು ಅಮಾನತುಗೊಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವರ್ತನೆ ಹಾಗೂ ಕೆಲಸಕ್ಕೆ ಗೈರು ಹಾಜರಾಗಿರುವ ಪೂರ್ಣೇಶ್ ನನ್ನ ತೀರ್ಥಹಳ್ಳಿ ಸಿಪಿಐ ಅವರ ವರದಿ ಆಧಾರಿಸಿ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ಅಮಾನತ್ತು ಆದೇಶ ಹೊರಡಿಸಿದ್ದಾರೆ.
ದುರಂತ ಗೊತ್ತೇ…, ಅಷ್ಟೊಂದು ಏಟು ತಿಂದ ಒದ್ದಿದ್ದ ಪೊಲೀಸಪ್ಪನ ಜೊತೆ ರಾತ್ರಿ ಮತ್ತೆ ಬಾರ್ ನಲ್ಲಿ ಕುಡಿದು ಕುಣಿದಾಡಿದ್ದ. ಮತ್ತು ಇಳಿದ ಮೇಲೆ ಪೂರ್ಣೇಶಪ್ಪನಿಗೆ ವಾಸ್ತವ ಹಾಗೂ ಅವಾಂತರ ಗೊತ್ತಾಗಿದೆ. ಇಂತಹವರ ಮನಃ ಪರಿವರ್ತನೆಗೆ ಮುಂದಾಗುವ ಅಗತ್ಯವಿದೆ. ಈ ಮಾಹಿತಿಯನ್ನು ನಿನ್ನೆಯೆ ತುಂಗಾತರಂಗ ನೀಡಿತ್ತು.
ಸಸ್ಪೆಂಡ್ ಮಾಡಿಸುವುದು, ಮಾಡುವುದು ಯಾವತ್ತೂ ಅಂತಿಮ ನಿರ್ಧಾರವಾಗದು. ಬದಲಾವಣೆಯ ಅವಕಾಶಗಳನ್ನು ನೀಡುತ್ತಲೆ ಇರಬೇಕಾದ ಅಗತ್ಯವೂ ಇದೆಯಲ್ಲವೇ…?!

By admin

ನಿಮ್ಮದೊಂದು ಉತ್ತರ

error: Content is protected !!