ಶಿವಮೊಗ್ಗ
ಇಲ್ಲಿನ ಮಹಾನಗರ ಪಾಲಿಕೆಯ ಕಾನೂನು ವ್ಯವಸ್ಥೆ, ನಿಯಮಗಳ ಬಳಕೆ ಹಣವಿದ್ದವರಿಗೆ ಒಂದು ಬಗೆಯಾ ದರೆ, ಜನಸಾಮಾನ್ಯರಿಗೆ ಮತ್ತೊಂದು ಬಗೆಯಲ್ಲಿ ಜಾರಿಯಲ್ಲಿರುತ್ತದೆ ಎಂಬುದಕ್ಕೆ ಸಾವಿರಾರು ಸಾಕ್ಷಿಗಳು ಸಿಗುತ್ತವೆ.
ಹಣ ಹಾಗೂ ಶಿಫಾರಸ್ಸಿನ ಧಯೆ ಇದ್ದರೆ ಏನೂ ಬೇಕಾದರೂ ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿ ಗಾಂಧಿನಗರ ಬಿ ಬ್ಲಾಕ್‌ನ ೫ ನೇ ತಿರುವಿನಲ್ಲಿ ಕಟ್ಟುತ್ತಿ ರುವ ಅಪಾರ್ಟ್‌ಮೆಂಟ್ ಸಾಕ್ಷಿಯಾಗಿ ನಿಲ್ಲುತ್ತದೆ.
ಇಲ್ಲಿ ಮನೆ ನಂ.೨೦೬ರ ಬಲಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕಟ್ಟುತ್ತಿರುವ ಅಪಾರ್ಟ್ ಮೆಂಟ್‌ನಲ್ಲಿ ಸೂಡಾ ಹಾಗೂ ಮಹಾನಗರ ಪಾಲಿಕೆಯ ಯಾವುದೇ ಕಾನೂನು ಪಾಲನೆಯಾಗಿಲ್ಲ. ಯಾವುದೇ ಸೆಟ್‌ಬ್ಯಾಕ್ ಬಿಡದಿದ್ದರೂ ಸಹ ಯಾವುದೇ ಕ್ರಮಕೈ ಗೊಂಡಿಲ್ಲ. ಅಪಾರ್ಟ್‌ಮೆಂಟ್ ಮುಂಭಾಗದ ನಿವೇಶ ನದ ಶೇ.೧೨ರಷ್ಟು ಸೈಡ್ ಮತ್ತು ಶೇ.೮ರಷ್ಟು ಮುಂಭಾಗದಲ್ಲಿ ಜಾಗ ಬಿಟ್ಟಿಲ್ಲ. ಈ ಬಗ್ಗೆ ಆಯುಕ್ತರು ಹಾಗೂ ಸಂಬಂಧಿಸಿದ
ಮಹಾನಗರ ಪಾಲಿಕೆ, ಸೂಡಾ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗಾಂಧಿನಗರ ನಿವಾಸಿಗಳ ಪರವಾಗಿ ಜಿ.ಎಸ್.ಮಲ್ಲಿಕಾರ್ಜುನ್ ಅವರು ಮನವಿ ಸಲ್ಲಿಸಿದ್ದಾರೆ.