ಶಿವಮೊಗ್ಗ, ಜೂ.25:
ಸಲೀಂ @ ಚೋರ್ ಸಲೀಂ ಬಿನ್ ಅಬ್ದುಲ್ ಬಷೀರ್, 36 ವರ್ಷ, ಸೂಳೆಬೈಲು, ಶಿವಮೊಗ್ಗ ಟೌನ್ ಈತನು ತನ್ನ 13ನೇ ವಯಸ್ಸಿನಿಂದಲೇ ರೌಡಿ ಮತ್ತು ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಈತನ ವಿರುಧ್ದ ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 25 ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ ಹಾಗೂ ದಿನಾಂಕಃ-20-05-2021 ರಂದು ಬೆಳಗಿನ ಜಾವ ಕೋಟೆ ಮತ್ತು ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ 06 ವಾಹನಗಳ ಗ್ಲಾಸ್ ಗಳನ್ನು ಒಡೆದು ಹಾಕಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡಿರುತ್ತಾನೆ ಮತ್ತು ಈತನು ತಲೆ ಮರೆಸಿಕೊಳ್ಳುವ ಪ್ರೌವೃತ್ತಿಯನ್ನು ಹೊಂದಿದ್ದು, ಸಾಮಾನ್ಯ ಕಾನೂನು ಕ್ರಮಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಡೆಗಟ್ಟಲು ಸಾದ್ಯವಾಗದೇ ಇರುವುದರಿಂದ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡುವಂತೆ ಕೋರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಶಿವಮೊಗ್ಗ ರವರಿಗೆ ಪ್ರಸ್ಥಾವನೆ ಸಲ್ಲಿಸಿದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಸದರಿ ವ್ಯಕ್ತಿಯ ವಿರುದ್ಧ ಬಂಧನ ಆಜ್ಞೆಯನ್ನು ಹೊರಡಿಸಿ ಕೇಂದ್ರ ಕಾರಾಗೃಹ ಕಲಬುರಗಿಯಲ್ಲಿ ಇರಿಸಲು ಆದೇಶಿಸಿರುತ್ತಾರೆ. ನಂತರ ದಿನಾಂಕಃ-01-06-2022 ರಂದು ಕರ್ನಾಟಕ ಸರ್ಕಾರವು ಸದರಿ ಆದೇಶವನ್ನು ಸ್ಥಿರೀಕರಿಸಿರುತ್ತದೆ ಮತ್ತು ಗೂಂಡಾ ಕಾಯ್ದೆ ಅಧಿನಿಯಮದಡಿ ರಚಿತವಾದ ಸಲಹಾ ಮಂಡಳಿಯು ಸಲೀಂ @ ಚೋರ್ ಸಲೀಂ ಈತನನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟು ವರದಿ ನೀಡಿದ ಮೇರೆಗೆ, ಘನ ಕರ್ನಾಟಕ ಸರ್ಕಾರವು ಸದರಿ ವ್ಯಕ್ತಿಯ ಬಂಧನದ ಆದೇಶವನ್ನು ದಿನಾಂಕಃ-25-05-2022 ರಿಂದ 01 ವರ್ಷದ ಅವಧಿಯವರೆಗೆ ಮುಂದುವರೆಸಿ ಆದೇಶಿಸಿರುತ್ತದೆ.