ನಗರದ ಡಿ.ವಿ.ಎಸ್.ಸಂಜೆ ಕಾಲೇಜು ಶ್ರಮಜೀವಿಗಳಿಗೆ ದಾರಿದೀಪ ಎಂದು ದೇಶಿಯ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕೋರ್ ಕಮಿಟಿಯ ಅಧ್ಯಕ್ಷ ಎನ್.ಎಂ.ಸಿ. ಮಂಜುನಾಥ್ ಹೇಳಿದರು.


ಅವರು ದೇಶೀಯ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡುತ್ತಾ, ಶ್ರಮಜೀವಿಗಳಿಗೆ ದಾರಿದೀಪ ಡಿ.ವಿ.ಎಸ್. ಸಂಜೆ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಪದೋನ್ನತಿ ಪಡೆದಿರುವುದು. ಅಷ್ಟೆ ಅಲ್ಲದೆ ವಿವಿಧಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಭವ್ಯ ಜೀವನ

ನಡೆಸುತ್ತಿದ್ದಾರೆ. ಹತ್ತು ಹಲವಾರು ವಿದ್ಯಾರ್ಥಿಗಳು ಸ್ವಂತ ಉದ್ಯೋಗವನ್ನು ಆರಿಸಿಕೊಂಡು ದೊಡ್ಡ ದೊಡ್ಡ ಉದ್ಯಮವನ್ನು ನಡೆಸುತ್ತಿದ್ದಾರೆ. ಅಲ್ಲದೆ ನೂರಾರು ಜನರಿಗೆ ನೌಕರಿ ನೀಡಿದ್ದಾರೆ.ಇಂತಹ ಸಂಸ್ಥೆಯಲ್ಲಿಕಲಿತ ಸಾವಿರಾರು ವಿದ್ಯಾರ್ಥಿಗಳಲ್ಲಿ ನಾನು ಒಬ್ಬ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ ಎಂದರು.


ವೇದಿಕೆಯಲ್ಲಿ ದೇಶಿಯ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕೋರ್ ಕಮಿಟಿಯ ಕಾರ್ಯದರ್ಶಿ ಎಸ್.ಆರ್.ಹಾಲಸ್ವಾಮಿ, ದೇಶೀಯ ವಿದ್ಯಾಶಾಲೆಯ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಸ್ಯಶಾಸ್ತದ ಮುಖ್ಯಸ್ಥ ಪ್ರೊ. ಸುಧಾಕರ್, ದೇಶೀಯ ಸಂಜೆ ಕಾಲೇಜಿನ ಪ್ರಾಂಶುಪಾಲ ಪದ್ಮೇಗೌಡ ಉಪ
ಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!