ಶಿವಮೊಗ್ಗ :

ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರಗುತ್ತಿ ಗ್ರಾಮದಲ್ಲಿ ಪಿಡಬ್ಲ್ಯೂಡಿ ವಸತಿ ಗೃಹದ ವಾಸಿಯೊಬ್ಬರ ಮನೆಯ ಬಾಗಿಲಿನ ಬೀಗವನ್ನು ಒಡೆದು ಮನೆಯಲ್ಲಿ ಇಟ್ಟಿದ್ದ ಚಿನ್ನದ ಆಭರಣ ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಕಳ್ಳನನ್ನು ಬಂಧಿಸಿ ಅಂದಾಜು ಮೌಲ್ಯ 9,80,000 ರೂ ಗಳ 182 ಗ್ರಾಂ ಬಂಗಾರದ ಆಭರಣಗಳು ಮತ್ತು 01 ಕೆಜಿ ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಮಂಜುನಾಥ್ ಅಲಿಯಾಸ್ ಬದರಿ ಮಂಜು (44) ಬಂಧಿತ ಆರೋಪಿ.‌ ಇತನ ವಿರುದ್ದ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 03 ಮತ್ತು ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ 02 ಪ್ರಕರಣಗಳು ಸೇರಿ ಒಟ್ಟು 05 ಮನೆಗಳ್ಳತನ ಪ್ರಕರಣಗಳಿಗೆ ದಾಖಲಾಗಿದ್ದವು.

ಸಿಪಿಐ ಸೊರಬ ವೃತ್ತ ಮತ್ತು ಪಿಎಸ್ಐ ಸೊರಬ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ಭಾಗವಹಿಸಿತ್ತು.

By admin

ನಿಮ್ಮದೊಂದು ಉತ್ತರ

error: Content is protected !!